
ಕಪ್ಪಗಿನ ಕೂದಲು ತಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ವರ್ಷ ಮೂವತ್ತರ ಗಡಿ ದಾಟುತ್ತಿದ್ದಂತೆ ನಿಧಾನಕ್ಕೆ ಬಿಳಿ ಕೂದಲಿನ ಹಾವಳಿ ಹೆಚ್ಚಾಗುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಚೆನ್ನಾಗಿ ಹೇರ್ ಸ್ಟೈಲ್ ಮಾಡಿಕೊಳ್ಳಬೇಕು ಎಂದುಕೊಳ್ಳುವಾಗ ಈ ಬಿಳಿ ಕೂದಲು ಒಂದು ರೀತಿ ನಿರಾಶೆ ಉಂಟು ಮಾಡುತ್ತದೆ. ಕೆಮಿಕಲ್ ಯುಕ್ತ ಹೇರ್ ಡೈ ಮಾಡಿಕೊಳ್ಳಲು ಇಷ್ಟಪಡದವರು ಒಮ್ಮೆ ಈ ಹೇರ್ ಡೈ ಮನೆಯಲ್ಲಿ ಟ್ರೈ ಮಾಡಿ.
ಇದಕ್ಕೆ ಬೇಕಾಗಿರುವುದು ಮೆಹಂದಿ ಹಾಗೂ ಇಂಡಿಗೋ ಪೌಡರ್. ಇದು ಆನ್ ಲೈನ್ ಹಾಗೂ ಕೆಲವು ಶಾಪ್ ಗಳಲ್ಲೂ ಲಭ್ಯವಿದೆ.
ಮೊದಲಿಗೆ ಒಂದು ಬೌಲ್ ಗೆ 4 ಚಮಚ ಮೆಹಂದಿ ಪೌಡರ್ ಹಾಕಿ ಅದಕ್ಕೆ ಟೀ ಡಿಕಾಕ್ಷನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡಿ ಹಾಗೇ ಇಡಿ.
ಬೆಳಿಗ್ಗೆ ಇದನ್ನು ತಲೆಗೆ ಹಚ್ಚಿಕೊಂಡು ಶವರ್ ಕ್ಯಾಪ್ ಹಾಕಿಕೊಳ್ಳಿ ಇಲ್ಲದಿದ್ದರೆ ಯಾವುದಾದರೂ ಪ್ಲಾಸ್ಟಿಕ್ ಕವರ್ ಅನ್ನು ತಲೆಗೆ ಹಾಕಿಕೊಳ್ಳಿ. 3 ಗಂಟೆ ಬಿಟ್ಟು ಸ್ನಾನ ಮಾಡಿ. ಶಾಂಪೂ ಬಳಸಬೇಡಿ. ಮಾರನೇ ದಿನ ಒಂದು ಬೌಲ್ ಗೆ 4 ಚಮಚ ಇಂಡಿಗೂ ಪೌಡರ್ ಹಾಕಿ ಅದಕ್ಕೆ ತುಸು ಉಗುರುಬೆಚ್ಚಗಿನ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದೇ ಕೂಡಲೇ ನಿಮ್ಮ ತಲೆಗೆ ಹಚ್ಚಿಕೊಳ್ಳಿ. 2 ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಇದರಿಂದ ಕೂದಲು ಕಪ್ಪು ಆಗುತ್ತದೆ.