ನವದೆಹಲಿ: ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS). ಇದರ ಅಡಿ, ನೀವು ವೈಯಕ್ತಿಕ ನಿವೃತ್ತಿ ಖಾತೆಯನ್ನು ತೆರೆಯಬಹುದು.
ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುವುದಾದರೆ ಇರುವ ಉತ್ತಮ ಆಯ್ಕೆ ಎಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ. ಉದ್ಯೋಗವನ್ನು ಆರಂಭಿಸಿದ ತಕ್ಷಣ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ನೀವು 34 ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಪಡೆಯಬಹುದು.
ಉದಾಹರಣೆಗೆ, ಒಬ್ಬ ವ್ಯಕ್ತಿಯು 20 ವರ್ಷ ವಯಸ್ಸಿನವರಾಗಿದ್ದರೆ ಮತ್ತು 40 ವರ್ಷಗಳವರೆಗೆ ತಿಂಗಳಿಗೆ ಸುಮಾರು 8,500 ರೂಪಾಯಿಗಳನ್ನು ಠೇವಣಿ ಮಾಡುತ್ತಿದ್ದರೆ, ಅವರು 9% ಆಂತರಿಕ ಆದಾಯದ ದರದಲ್ಲಿ (IRR) ಸುಮಾರು 4 ಕೋಟಿ ರೂಪಾಯಿಗಳನ್ನು ಪಡೆಯಬಹುದು.
ವ್ಯಕ್ತಿಯು ಸಂಪೂರ್ಣ ಕಾರ್ಪಸ್ ಅನ್ನು ವರ್ಷಾಶನ ಮಾಡಲು ಆರಿಸಿಕೊಂಡರೆ, ಅಂಥವರು ರೂ. 2 ಲಕ್ಷಗಳ ಮಾಸಿಕ ಪಿಂಚಣಿಯನ್ನು ಪಡೆಯಬಹುದು.
ಪ್ರತಿ ದಿನ 50 ರೂ. ಹೂಡಿಕೆ ಮಾಡಿದರೆ 34 ಲಕ್ಷ ರೂ. ಸಿಗುತ್ತವೆ. ಅದರ ವಿವರ ಹೀಗಿದೆ:
1. ಹೂಡಿಕೆ ಆರಂಭಿಸುವ ವಯಸ್ಸು – 25 ವರ್ಷ
2. NPS ನಲ್ಲಿ ಮಾಸಿಕ ಹೂಡಿಕೆ – Rs 1,500
3. ಹೂಡಿಕೆ ಸಮಯ – 35 ವರ್ಷಗಳು
4. 35 ವರ್ಷಗಳಲ್ಲಿ ಹೂಡಿಕೆ ಮಾಡಿದ ಒಟ್ಟು ಹಣ – 6.30 ಲಕ್ಷ ರೂ.
5. ಹೂಡಿಕೆಯ ಮೊತ್ತದ ಮೇಲೆ ಪಡೆಯವ ಒಟ್ಟು ಬಡ್ಡಿ – 27.9 ಲಕ್ಷಗಳು
6. ಪಿಂಚಣಿ (Pension) ಸಮಯದಲ್ಲಿ ಒಟ್ಟು ಠೇವಣಿ – 34.19 ಲಕ್ಷ
7. ಇದರ ಅಡಿಯಲ್ಲಿ ಒಟ್ಟು ತೆರಿಗೆ ಉಳಿತಾಯ – 1.89 ಲಕ್ಷ
NPS ಖಾತೆಯನ್ನು ತೆರೆಯಲು ಎರಡು ಮಾರ್ಗಗಳಿವೆ:
1) POP-SP (ಪಾಯಿಂಟ್ ಆಫ್ ಪ್ರೆಸೆನ್ಸ್ ಸರ್ವಿಸ್ ಪ್ರೊವೈಡರ್)ಗೆ ಭೇಟಿ ನೀಡುವ ಮೂಲಕ ಬ್ಯಾಂಕ್ ಶಾಖೆ, ಪೋಸ್ಟ್ ಆಫೀಸ್‌ಗಳಲ್ಲಿ ಖಾತೆ ತೆರೆಯಬಹುದು.
2) PAN ಮತ್ತು ಬ್ಯಾಂಕ್ ವಿವರಗಳನ್ನು ಬಳಸಿಕೊಂಡು eNPS ವೆಬ್‌ಸೈಟ್ (https://enps.nsdl.com/eNPS/NationalPensionSystem.html) ಮೂಲಕ ಆನ್‌ಲೈನ್‌ನಲ್ಲಿ ಖಾತೆ ತೆರೆಯಬಹುದು.