ರಾಜಕೀಯ ಪಕ್ಷಗಳಿಗೆ ಯಾವ ಕ್ಷೇತ್ರದಿಂದ, ಯಾವ ಉಪಕಾರಕ್ಕಾಗಿ, ಯಾರು ಹಣ ನೀಡುತ್ತಾರೆ ಎನ್ನುವುದು ಚಿದಂಬರ ರಹಸ್ಯವೇ ಸರಿ. ಸದ್ಯದ ಮಟ್ಟಿಗಂತಲೂ ಬಿಜೆಪಿ, ಕಾಂಗ್ರೆಸ್, ಎನ್‍ಸಿಪಿ, ಟಿಎಂಸಿಯಂತಹ ರಾಷ್ಟ್ರೀಯ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ಕೋಟಿಗಟ್ಟಲೆ ಹಣವನ್ನು ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಸ್ವೀಕರಿಸುತ್ತಿರುವುದು ಜನಸಾಮಾನ್ಯರಿಗೆ ತಿಳಿದ ವಿಚಾರವೇ ಆಗಿದೆ.
ಆದರೆ, ಗುರುತೇ ಇಲ್ಲದ ಅಥವಾ ಗುರುತೇ ಹಿಡಿಯಲಾಗದಂತಹ ರಹಸ್ಯ ಮೂಲಗಳಿಂದ 2019-20ನೇ ಹಣಕಾಸು ವರ್ಷದಲ್ಲಿ ದೇಶದ ರಾಷ್ಟ್ರೀಯ ಪಕ್ಷಗಳಿಗೆ ಬರೋಬ್ಬರಿ 3,377.41 ಕೋಟಿ ರೂ. ಹರಿದುಬಂದಿದೆಯಂತೆ ! ಹೌದು, ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ತನ್ನ ವರದಿಯಲ್ಲಿ ಇದನ್ನು ಬಹಿರಂಗಪಡಿಸಿದೆ. ಈ ಪೈಕಿ ಎಲೆಕ್ಟೋರಲ್ ಬಾಂಡ್‍ಗಳ ಮೂಲಕ ಸಂದಾಯವಾಗಿರುವುದು 2,993.82 ಕೋಟಿ ರೂ. ಅಂತೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಯ್ತು ಜಲಪಾತ..!
ಕೇಂದ್ರ ಸರಕಾರದಲ್ಲಿ ಆಡಳಿತದಲ್ಲಿರುವ ಬಿಜೆಪಿಯದ್ದೇ ಸಿಂಹಪಾಲು. ಸುಮಾರು 2,642.63 ಕೋಟಿ ರೂ. ಕಮಲ ಪಾಳಯಕ್ಕೆ ಬಂದಿದೆ. ಅಂದರೆ ರಾಷ್ಟ್ರೀಯ ಪಕ್ಷಗಳಿಗೆ ರಹಸ್ಯವಾಗಿ ಬಂದಿರುವ ಮೊತ್ತದ ಶೇ. 78.24ರಷ್ಟು ಪಾಲು ಬಿಜೆಪಿಯದ್ದೇ ಆಗಿದೆ. ಕಾಂಗ್ರೆಸ್‍ಗೆ 526 ಕೋಟಿ ರೂ. ಸಿಕ್ಕಿದೆ.