ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳಲ್ಲೂ ಮೋಸ ಮಾಡಲಾಗ್ತಿದೆ.
ಜನರನ್ನು ಆಕರ್ಷಿಸಲು, ತರಕಾರಿಗಳಿಗೆ ಬಣ್ಣ ಹಾಕಲಾಗುತ್ತದೆ. ಬಣ್ಣ ನೋಡಿ, ತರಕಾರಿ ಫ್ರೆಶ್ ಇದೆ ಎಂದು ಭಾವಿಸಿ ನಾವು ಮನೆಗೆ ತಂದು ಅದ್ರ ಸೇವನೆ ಮಾಡ್ತೆವೆ. ಆದ್ರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮಾರುಕಟ್ಟೆಯಿಂದ ತಂದ ತರಕಾರಿಗಳಿಗೆ ಬಣ್ಣ ಹಾಕಲಾಗಿದ್ಯಾ, ಇಲ್ಲವಾ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಎಫ್ ಎಸ್ ಎಸ್ ಎ ಐ ಈ ಬಗ್ಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಿಂದ ತರಕಾರಿಗೆ ಬಣ್ಣ ಹಚ್ಚಲಾಗಿದ್ಯಾ ಎಂಬುದನ್ನು ಸುಲಭವಾಗಿ ಹೇಗೆ ಪತ್ತೆ ಮಾಡಬಹುದು ಎಂಬುದನ್ನು ಇದ್ರಲ್ಲಿ ತೋರಿಸಲಾಗಿದೆ.
ಮೊದಲು ಒಂದು ಹತ್ತಿಗೆ ಪ್ಯಾರಾಫಿನ್ ಹಾಕಬೇಕು. ನಂತ್ರ ಹತ್ತಿಯನ್ನು ತರಕಾರಿ ಮೇಲೆ ರಬ್ ಮಾಡಬೇಕು. ಹತ್ತಿಗೆ ಬಣ್ಣ ಹತ್ತಿಕೊಂಡಲ್ಲಿ ತರಕಾರಿಗೆ ಬಣ್ಣ ಹಾಕಿದ್ದಾರೆ ಎಂದರ್ಥ. ತರಕಾರಿಗಳಿಗೆ ಮಲಾಚೈಟ್ ಗ್ರೀನ್ ಬಣ್ಣ ಹಚ್ಚಲಾಗುವುದು. ಮೀನಿನ ಚಿಕಿತ್ಸೆಗೆ ಇದನ್ನು ಬಳಸಲಾಗುವುದು. ಈ ಬಣ್ಣ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕ್ಯಾನ್ಸರ್ ಗೆ ಇದು ಕಾರಣವಾಗುತ್ತದೆ. ಅಂಗಾಂಶಗಳನ್ನು ಹಾನಿಗೊಳಿಸುತ್ತದೆ.
ಎಫ್ ಎಸ್ ಎಸ್ ಎ ಐ, ಶುದ್ಧ ಅರಿಶಿನ ಪರೀಕ್ಷೆ ಬಗ್ಗೆಯೂ ವಿಡಿಯೋ ಬಿಡುಗಡೆ ಮಾಡಿದೆ. ಎರಡು ಗ್ಲಾಸ್ ಗೆ ನೀರನ್ನು ಹಾಕಬೇಕು. ಅದಕ್ಕೆ ಅರಿಶಿನವನ್ನು ಹಾಕಬೇಕು. ಅರಿಶಿನ ಶುದ್ಧವಾಗಿದ್ದರೆ ಕೆಳಗೆ ಕುಳಿತುಕೊಳ್ಳುತ್ತದೆ. ಜೊತೆಗೆ ನೀರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಣ್ಣ ಬೆರೆಸಿದ ಅರಿಶಿನ ಕೆಳಗೆ ಕುಳಿತುಕೊಳ್ಳುವುದಿಲ್ಲ. ಹಾಗೆ ನೀರಿನ ಬಣ್ಣ ಅಚ್ಚ ಹಳದಿಯಾಗಿರುತ್ತದೆ. ಇದಲ್ಲದೆ ಎಫ್ ಎಸ್ ಎಸ್ ಎಐ, ಉಪ್ಪು, ಮೊಟ್ಟೆಯ ಪರೀಕ್ಷೆ ಬಗ್ಗೆಯೂ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.