ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಗೆ ಒತ್ತಡ ಹೆಚ್ಚಿಸಿರುವುದು ಕೋರ್ಟ್‌ಗಳಲ್ಲಿರುವ ಭಾರಿ ಸಂಖ್ಯೆಯ ಪ್ರಕರಣಗಳು. ಈ ಬಗ್ಗೆ ಸುಪ್ರೀಂಕೋರ್ಟ್ ಕೂಡ ಹಲವು ಬಾರಿ ಕಳವಳ ವ್ಯಕ್ತಪಡಿಸಿದೆ.
ಶೀಘ್ರವೇ ಸಾವಿರಾರು ಸಂಖ್ಯೆಯಲ್ಲಿ ಪ್ರಮುಖ ವಿಷಯಾಧಾರಿತ ಕೇಸ್‌ಗಳ ಇತ್ಯರ್ಥಕ್ಕೆ ಮುಂದಾಗಬೇಕಿದೆ ಎಂದು ತನ್ನ ಅಧೀನ ನ್ಯಾಯಾಲಯಗಳಿಗೆ ಸಂದೇಶ ಕೊಟ್ಟಿದೆ.
ಹಾಗಿದ್ದೂ ಕೂಡ ನಿತ್ಯ ನೂರಾರು ಕೇಸ್‌ಗಳು ಹೊಸದಾಗಿ ಕೋರ್ಟ್ ಮೆಟ್ಟಿಲೇರುತ್ತಿವೆ. ಹಾಗಾಗಿ ಸಣ್ಣಪುಟ್ಟ ಹಾಗೂ ದೀರ್ಘಕಾಲದಿಂದ ಕಗ್ಗಂಟಾಗಿರುವ ಜತೆಗೆ ಪ್ರಕರಣ ಹೂಡಿದವರೇ ನಾಪತ್ತೆ ಅಥವಾ ಸಾವಿಗೀಡಾಗಿರುವಂಥ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಂಡು ಹೊರೆ ಇಳಿಸಲು ದಾವೆ ಹೂಡಿದವರಿಗೂ ಕೋರ್ಟ್‌ಗಳು ಕಿವಿಮಾತು ಹೇಳಿವೆ.
ಇಲ್ಲಿದೆ ಸುಲಭವಾಗಿ ಆಪಲ್ ಸ್ಟ್ರೂಡೆಲ್ ಮಾಡುವ ವಿಧಾನ
ಈ ನಿಟ್ಟಿನಲ್ಲಿ ಕೊರೊನಾ ನಡುವೆಯೂ ಕೂಡ 2021ರಲ್ಲಿ ಹಮ್ಮಿಕೊಳ್ಳಲಾದ ವರ್ಚುವಲ್ ಅಥವಾ ’ಇ-ಲೋಕ ಅದಾಲತ್’ಗಳಲ್ಲಿ 1,27,87,329 ಕೇಸ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಘೋಷಿಸಿದೆ. ಆ ಪೈಕಿ ಮುಂಚಿತವಾಗಿಯೇ ವ್ಯಾಜ್ಯ ಹೊಂದಿದ್ದ 72 ಲಕ್ಷ ಕೇಸ್‌ಗಳು ಇತ್ಯರ್ಥಗೊಂಡಿರುವುದು ದಾಖಲೆ ಎನಿಸಿದೆ.
ಒಟ್ಟು ನಾಲ್ಕು ರಾಷ್ಟ್ರೀಯ ಮಟ್ಟದ ಲೋಕಅದಾಲತ್ ನಡೆಸಲಾಗಿದೆ. ಇದನ್ನು ಗಮನಿಸಿರುವ ರಾಷ್ಟ್ರೀಯ ಕಾನೂನು ಸೇವೆಗಳ ಆಯೋಗವು ಲೋಕ ಅದಾಲತ್‌ಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.