ಹಿಂದಿ – ತಮಿಳು ಭಾಷಾ ವಿಚಾರವಾಗಿ ವಿವಾದದ ಕೇಂದ್ರಬಿಂದುವಾಗಿದ್ದ ಜೊಮ್ಯಾಟೋ ಕಂಪನಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿತ್ತು. ಅಲ್ಲದೇ ತಮಿಳು ಗ್ರಾಹಕರ ಮನಸ್ಸಿಗೆ ನೋವುಂಟು ಮಾಡಿದ್ದ ಕಸ್ಟಮರ್ ಎಕ್ಸಿಕ್ಯೂಟಿವ್ರನ್ನು ಕೆಲಸದಿಂದ ಅಮಾನತು ಮಾಡಿದ್ದಾಗಿಯೂ ಕಂಪನಿ ಮಾಹಿತಿ ನೀಡಿತ್ತು. ಆದರೆ ಇದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಕಂಪನಿಯು ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ಕರೆದಿದೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕುರಿತು ʼಶಾಕಿಂಗ್ʼ ಸಂಗತಿ ಬಹಿರಂಗ
ಸ್ವಲ್ಪವಾದರೂ ಹಿಂದಿ ತಿಳಿದಿರಬೇಕು ಎಂದು ಹೇಳಿದ್ದ ಏಜೆಂಟ್ ವಿರುದ್ಧ ತಮಿಳಿಗರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಜೊಮ್ಯಾಟೋ ಕ್ಷಮೆ ಯಾಚಿಸಿ ಪ್ರಕಟಣೆ ಬಿಡುಗಡೆ ಮಾಡಿತ್ತು. ಅಲ್ಲದೇ ಕಂಪನಿಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾಗಿಯೂ ವಿವರಣೆ ನೀಡಿತ್ತು.
ಆದರೆ ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ಬಳಿಕ ಸಿಇಓ ದೀಪಿಂದರ್ ಗೋಯಲ್ ಟ್ವೀಟ್ ಮಾಡಿದ್ದು ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ನೇಮಿಸಿರುವುದಾಗಿ ಹೇಳಿದ್ದಾರೆ. ಕಾಲ್ ಸೆಂಟರ್ ಎಕ್ಸಿಕ್ಯೂಟಿವ್ಗಳು ಪ್ರಾದೇಶಿಕ ಭಾಷೆಗಳಲ್ಲಿ ಪರಿಣಿತಿ ಹೊಂದಿಲ್ಲ ಎಂದು ಹೇಳಿದ್ದಾರೆ.
ʼಕ್ರೆಡಿಟ್ ಕಾರ್ಡ್ʼ ನ ಈ ಲಾಭ ನಿಮಗೆ ತಿಳಿದಿರಲಿ
ಫುಡ್ ಡೆಲಿವರಿ ಕಸ್ಟಮರ್ ಸರ್ವೀಸ್ ಕೇಂದ್ರದಲ್ಲಿ ಒಬ್ಬರು ಮಾಡಿದ ತಪ್ಪಿಗೆ ಇಡೀ ಜೊಮ್ಯಾಟೋ ಕಂಪನಿ ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಗ್ರಾಸವಾಗಿದೆ. ನಮ್ಮ ದೇಶದಲ್ಲಿ ಸಹಿಷ್ಣುತೆ ಇಂದಿನ ದಿನಗಳಿಗಿಂತ ಹೆಚ್ಚಿನದಾಗಿರಬೇಕು. ಇಲ್ಲಿ ಯಾರನ್ನು ದೂಷಿಸಬೇಕು ? ಎಂದು ಟ್ವೀಟಾಯಿಸಿದ್ದಾರೆ .
ನಾವೆಲ್ಲರೂ ಪರಸ್ಪರರ ಅಪೂರ್ಣತೆಗಳನ್ನು ಸಹಿಸಿಕೊಳ್ಳಬೇಕು. ಪರಸ್ಪರರ ಭಾಷೆ ಹಾಗೂ ಪ್ರಾದೇಶಿಕ ಗೌರವಗಳನ್ನು ಪ್ರಶಂಸಿಸಬೇಕು. ತಮಿಳುನಾಡು – ದೇಶದ ಉಳಿದ ಭಾಗಗಳನ್ನು ಪ್ರೀತಿಸುವಂತೆ ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಾವೆಲ್ಲರೂ ಒಂದೇ ಎಂದು ಬರೆದಿದ್ದಾರೆ.