ನವದೆಹಲಿ: ಚೀನಾ ಗಡಿ ಕ್ಯಾತೆ ತೆಗೆದಿರುವ ಲಡಾಕ್‍ನ ಪ್ಯಾಂಗಾಂಗ್ ಸರೋವರದ ಬಳಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಧ್ವಜಾರೋಹಣ ನಡೆಸಿ ತಮ್ಮ ಸಾರ್ವಭೌಮತ್ವದ ಸಂದೇಶ ರವಾನಿಸಿದ್ದಾರೆ.
ಸರೋವರದ ಸುತ್ತಲೂ ಗಸ್ತು ತಿರುಗಿರುವ ಯೋಧರು, ಕೈಯಲ್ಲಿ ರಾಷ್ಟ್ರಧ್ವಜವನ್ನು ಗೌರವದಿಂದ ಹಿಡಿದು ಸಾಗಿರುವುದು ವಿಶೇಷ. ಬಳಿಕ ರಾಷ್ಟ್ರಗೀತೆ ಮೂಲಕ ನಮನ ಸಲ್ಲಿಸಿ , ಸಿಹಿ ಹಂಚಿಕೊಂಡಿದ್ದಾರೆ. ಸಮುದ್ರಮಟ್ಟದಿಂದ 17000 ಅಡಿಗಳಷ್ಟು ಎತ್ತರವಿರುವ ಲಡಾಕ್‍ನ ಗಡಿಯ ಚೆಕ್‍ಪೋಸ್ಟ್ ಗಳ ತ್ರಿವರ್ಣ ಧ್ವಜ ಹಾರಾಡಿದೆ. ಉತ್ತರಾಖಂಡ ಗಡಿಯಲ್ಲೂ ಐಟಿಬಿಪಿ ಯೋಧರು ಧ್ವಜಾರೋಹಣ ನಡೆಸಿ ಗೌರವ ಸಲ್ಲಿಸಿದ್ದಾರೆ.
ಮಾತಿನ ಭರದಲ್ಲಿ ಡಿಕೆಶಿ ಎಡವಟ್ಟು; ಹುತಾತ್ಮ ಸೋನಿಯಾ ಗಾಂಧಿ ಎಂದ ಕೆಪಿಸಿಸಿ ಅಧ್ಯಕ್ಷ
ಈ ವರ್ಷ 23 ಐಟಿಬಿಪಿ ಯೋಧರಿಗೆ ಶೌರ್ಯ ಪದಕ (ಪಿಎಂಜಿ) ನೀಡಿ ಗೌರವಿಸಲಾಗಿದೆ. ಈ ಪೈಕಿ 20 ಯೋಧರು ಕಳೆದ ವರ್ಷ ಪೂರ್ವ ಲಡಾಕ್‍ನಲ್ಲಿನ ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಇದುವರೆಗಿನ ಅತಿ ಹೆಚ್ಚು ಶೌರ್ಯ ಪದಕಗಳನ್ನು ಪಡೆದ ಸಂಭ್ರಮದಲ್ಲಿ ಐಟಿಬಿಪಿ ಯೋಧರಿದ್ದಾರೆ.