ದೆಹಲಿಯಲ್ಲಿ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು. ಸೋಮವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಕನ್ನಡದ ‘ಅಕ್ಷಿ’ ಅತ್ಯುತ್ತಮ ಚಲನಚಿತ್ರ ಪುರಸ್ಕಾರಕ್ಕೆ ಪಾತ್ರವಾಗಿದೆ. ತುಳು ಭಾಷೆಯ ‘ಪಿಂಗಾರ’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರ್, ಹಿಂದಿಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ನಟ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಟ ಧನುಷ್, ವಿಜಯ್ ಸೇತುಪತಿ, ಮನೋಜ್ ಬಾಜ್‌ಪೇಯಿ, ಕಂಗನಾ ರಣಾವತ್ ಅವರನ್ನು ಕೂಡ ಗೌರವಿಸಲಾಯಿತು.
ಅತ್ಯುತ್ತಮ ಚಲನಚಿತ್ರ: ಮರಕ್ಕಾರ್: ಲೈಯನ್ ಆಫ್ ದಿ ಅರೇಬಿಯನ್ ಸಿ
ಅತ್ಯುತ್ತಮ ಕನ್ನಡ ಚಿತ್ರ: ಅಕ್ಷಿ
ಅತ್ಯುತ್ತಮ ತುಳು ಚಿತ್ರ: ಪಿಂಗಾರ, ಮಿಶಿಂಗ್-ಅನು ರುವಾಡ್
ಅತ್ಯುತ್ತಮ ಹಿಂದಿ ಚಿತ್ರ: ಚಿಚೋರ್
ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
ಅತ್ಯುತ್ತಮ ತಮಿಳು ಚಿತ್ರ: ಅಸುರನ್
ಅತ್ಯುತ್ತಮ ನಟ: ಭೋಂಸ್ಲೆಗಾಗಿ ಮನೋಜ್ ಬಾಜಪೇಯಿ ಮತ್ತು ಅಸುರನ್‌ಗಾಗಿ ಧನುಷ್
ಅತ್ಯುತ್ತಮ ನಟಿ: ಕಂಗನಾ ರಣಾವತ್, ಪಂಗಾ ಮತ್ತು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಜಾನ್ಸಿ
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ, ತಾಷ್ಕೆಂಟ್ ಫೈಲ್ಸ್
ಅತ್ಯುತ್ತಮ ಪೋಷಕ ನಟ: ಸೂಪರ್ ಡಿಲಕ್ಸ್‌ಗಾಗಿ ವಿಜಯ್ ಸೇತುಪತಿ
ಬಿ ಪ್ರಾಕ್ ಅವರು ತೇರಿ ಮಿಟ್ಟಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಪಡೆದಿದ್ದಾರೆ.