ಪತಿ, ಪತ್ನಿಗೆ ಹೊಡೆಯುವುದು ಇಂದು, ನಿನ್ನೆಯದಲ್ಲ. ಹಿಂದಿನಿಂದಲೂ ಕೌಟುಂಬಿಕ ಹಿಂಸೆ ಭಾರತದಲ್ಲಿ ಸರ್ವೆ ಸಾಮಾನ್ಯವಾಗಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸಲು ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ವಿಚಿತ್ರವೆಂದ್ರೂ ಇಷ್ಟೆಲ್ಲರ ಮಧ್ಯೆಯೂ ಅನೇಕರು ಕೌಟುಂಬಿಕ ಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಅಚ್ಚರಿ ಹುಟ್ಟಿಸುತ್ತದೆ. ಸಮೀಕ್ಷೆಯಲ್ಲಿ, 18 ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಸಮೀಕ್ಷೆಯ ಪ್ರಕಾರ, ಕೌಟುಂಬಿಕ ದೌರ್ಜನ್ಯವನ್ನು ಬೆಂಬಲಿಸುವವರು, ಅತ್ತೆಗೆ ಅಗೌರವ, ಮನೆ ಮತ್ತು ಮಕ್ಕಳ ನಿರ್ಲಕ್ಷ್ಯ ಮುಖ್ಯ ಕಾರಣವೆಂದಿದ್ದಾರೆ.
ಜನರಿಗೆ 7 ಪ್ರಶ್ನೆಗಳನ್ನು ಕೇಳಲಾಗಿತ್ತು.
- ತಿಳಿಸದೆ ಮನೆಯಿಂದ ಹೊರಗೆ ಹೋದರೆ
- ಮಹಿಳೆ ಮನೆ ಅಥವಾ ಮಕ್ಕಳನ್ನು ನಿರ್ಲಕ್ಷಿಸಿದರೆ
- ಮಹಿಳೆ ಪತಿಯೊಂದಿಗೆ ಜಗಳವಾಡಿದರೆ
- ಮಹಿಳೆ ಪತಿ ಜೊತೆ ಸಂಬಂಧ ನಿರಾಕರಿಸಿದರೆ
- ಪತಿಗೆ ಸರಿಯಾಗಿ ಅಡುಗೆ ಮಾಡದಿದ್ದರೆ
- ಹೆಂಡತಿ ಮೋಸ ಮಾಡಿದ್ದಾಳೆ ಎಂಬ ಅನುಮಾನ
- ಅತ್ತೆಗೆ ಗೌರವ ತೋರದೆ ಹೋದರೆ
ಈ ಎಲ್ಲ ಪ್ರಶ್ನೆಗಳಿಗೆ ಜನರು ಉತ್ತರ ನೀಡಿದ್ದಾರೆ. ತೆಲಂಗಾಣದಲ್ಲಿ ಅತಿ ಹೆಚ್ಚು ಮಹಿಳೆಯರಿದ್ದು, ಶೇಕಡಾ 83.8ರಷ್ಟು ಮಂದಿ, ಪುರುಷರು ಪತ್ನಿಯರನ್ನು ಥಳಿಸುವುದು ಸೂಕ್ತ ಎಂದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಅತಿ ಕಡಿಮೆ ಮಹಿಳೆಯರು ಇದಕ್ಕೆ ಸಹಮತ ಸೂಚಿಸಿದ್ದಾರೆ. ಶೇಕಡಾ 14.8 ರಷ್ಟು ಮಹಿಳೆಯರು ಕೌಟುಂಬಿಕ ಹಿಂಸೆ ಬೆಂಬಲಿಸಿದ್ದಾರೆ. ಕರ್ನಾಟಕದಲ್ಲಿ ಶೇಕಡಾ 81.9 ಪುರುಷರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೌಟುಂಬಿಕ ಹಿಂಸೆಯನ್ನು ಸಮರ್ಥಿಸುವ ಅನೇಕ ರಾಜ್ಯಗಳಿವೆ. ಇವುಗಳಲ್ಲಿ ಆಂಧ್ರಪ್ರದೇಶ (83.6%), ಕರ್ನಾಟಕ (76.9%), ಮಣಿಪುರ (65.9%) ಮತ್ತು ಕೇರಳ (52.4%) ಸೇರಿವೆ. ಹಿಮಾಚಲ ಪ್ರದೇಶ ಮತ್ತು ತ್ರಿಪುರಾದಲ್ಲಿ ಕೌಟುಂಬಿಕ ದೌರ್ಜನ್ಯವನ್ನು ಬೆಂಬಲಿಸಿದ ಪುರುಷರ ಸಂಖ್ಯೆ ಕಡಿಮೆ ಇದೆ.
ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಮೀಕ್ಷೆಗಳನ್ನು ನಡೆಸಲಾಗಿದೆ.