2024-25 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ 17 ನೇ ಸುತ್ತಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 1-19ನೇ ವಯೋಮಾನದ ಎಲ್ಲಾ ಮಕ್ಕಳಿಗೆ ಮಾತ್ರೆ ವಿತರಣೆಗೆ ಸೂಚಿಸಲಾಗಿದೆ.
ಇದೇ ಡಿ.09ರಂದು ಜಂತು ನಿವಾರಕ ಮಾತ್ರೆಯನ್ನು ತಾಲ್ಲೂಕಿನದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಶಾಲೆಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ನುಂಗಿಸಲಾಗುತ್ತದೆ. ಈ ದಿನಗಳಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಅಂಗನವಾಡಿಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಾರಣಾಂತರಗಳಿಂದ ಆ ದಿನದಂದು ತಪ್ಪಿ ಹೋದ ಮಕ್ಕಳಿಗೆ ಡಿ.16ರಂದು ಮಾಪ್ ಅಪ್ ರೌಂಡ್ ನಡೆಸಲಾಗುತ್ತದೆ. ಮನೆ ಮನೆಗೆ ಭೇಟಿ ನೀಡಿ, ತಪ್ಪಿ ಹೋದ ಎಲ್ಲ ಮಕ್ಕಳಿಗೂ ಜಂತು ನಿವಾರಕ ಮಾತ್ರೆಯನ್ನು ನುಂಗಿಸಲಾಗುತ್ತದೆ ಎಂದು ಹೇಳಲಾಗಿದೆ.