ಬೆಂಗಳೂರು : ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ( ಎಎಸ್ಆರ್ಟಿಯು) 2023-24 ನೇ ಸಾಲಿನ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೆಎಸ್ಆರ್ಟಿಸಿ ಮತ್ತು ಒಂದು ರಾಷ್ಟ್ರೀಯ ಪ್ರಶಸ್ತಿಯನ್ನು ಬಿಎಂಟಿಸಿ ಪಡೆದಿವೆ.
ಅಶ್ವಮೇಧ ಬ್ರ್ಯಾಂಡಿಂಗ್, ವರ್ಚಸ್ಸು ಅಭಿವೃದ್ಧಿ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಯೋಜನೆಗಳು ಹಾಗೂ ಗಣಕೀಕರಣಕ್ಕಾಗಿ ಕೆಎಸ್ಆರ್ಟಿಸಿಗೆ ಮೂರು ಪ್ರಶಸ್ತಿಗಳು ಅಭಿಸಿವೆ. ಮೆಟ್ರೊ ಫೀಡರ್ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪ್ರಯೋಗಕ್ಕಾಗಿ ಬಿಎಂಟಿಸಿಗೆ ಪ್ರಶಸ್ತಿ ನೀಡಲಾಗಿದೆ. ನವದೆಹಲಿಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಪ್ರಶಸ್ತಿ ಪ್ರದಾನ ಮಾಡಿದರು.