ಸ್ವಾತಂತ್ರ್ಯ ಹೋರಾಟಗಾರ ಭಗತ್ ಅವರನ್ನು ಗೌರವಿಸುವ ಹಿಂದೂಸ್ತಾನಿಗಳು ಮತ್ತು ವಿಶೇಷವಾಗಿ ಹಿಂದೂಗಳು ಭಗತ್ ಸಿಂಗ್ ಬಲಿದಾನ ದಿವಸವನ್ನು ಆಚರಿಸುತ್ತಿದ್ದಾರೆ.
ಬಲಿದಾನದ ದಿನದಂದು ಭಗತ್ ಸಿಂಗ್ ಅವರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಿದ್ದಾರೆ. ಆದರೆ, ಭಗತ್ ಸಿಂಗ್ ಅವರನ್ನು ದೇಶದ್ರೋಹಿ ಮತ್ತು ಬ್ರಾಹ್ಮಣರ ಬೂಟ್ ಲಿಕ್ಕರ್ ಎಂದು ಕರೆದು ಅವಹೇಳನ ಮಾಡಲಾಗಿದೆ. ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಮಾರ್ಚ್ 23 ರಂದು ಹಿಂಸಾತ್ಮಕ ಖಲಿಸ್ತಾನಿ ಪ್ರತಿಭಟನೆಯ ವಿಡಿಯೋ ಕ್ಲಿಪ್ ಅನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಖಲಿಸ್ತಾನದ ಧ್ವಜಗಳಿಂದ ಸುತ್ತುವರಿದಿರುವ ಸಿಖ್ ವ್ಯಕ್ತಿಯೊಬ್ಬ ಪಂಜಾಬಿಯಲ್ಲಿ ‘ಭಗತ್ ಸಿಂಗ್ ಒಬ್ಬ ದೇಶದ್ರೋಹಿ. ಅವರು ಸಿಖ್ ನಾಯಕರನ್ನು ಭಯೋತ್ಪಾದಕರು ಎಂದು ಸಾಬೀತುಪಡಿಸಿದರು. ಬ್ರಾಹ್ಮಣರ ಪಾದರಕ್ಷೆಯನ್ನು ನೆಕ್ಕುವ ಮೂಲಕ ಇಡೀ ಸಿಖ್ ಸಮುದಾಯವನ್ನು ಭಯೋತ್ಪಾದಕರು ಎಂದು ಸಾಬೀತುಪಡಿಸಿದರು. ಅವನು ‘ಶಹೀದ್-ಎ-ಆಜಂ’ ಅಲ್ಲ ಅವನು ಕೇವಲ ದೇಶದ್ರೋಹಿ ಎಂದು ಟೀಕಿಸಿದ್ದಾನೆ.
https://twitter.com/Anshulspiritual/status/1638902111181373441