ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅಳಿಯ ಹಸನ್ ಜಾಫರ್ ಖಾಸಿರ್ ಸೇರಿದಂತೆ ಇಬ್ಬರು ಲೆಬನಾನ್ ಪ್ರಜೆಗಳು ಡಮಾಸ್ಕಸ್ ನ ಮಝೆ ವೆಸ್ಟರ್ನ್ ವಿಲ್ಲಾಸ್ ನೆರೆಹೊರೆಯ ನಿವಾಸದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ವರದಿ ತಿಳಿಸಿದೆ.
ಹಿಜ್ಬುಲ್ಲಾ ಮತ್ತು ಇರಾನಿನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಾಯಕರು ಆಗಾಗ್ಗೆ ಭೇಟಿ ನೀಡುವ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಗೆ ಬುಧವಾರ ಅಪ್ಪಳಿಸಿದ ಇಸ್ರೇಲ್ ದಾಳಿಯಲ್ಲಿ ಇಬ್ಬರು ಸಿರಿಯನ್ನರಲ್ಲದವರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ನಿಂದ ಈ ದಾಳಿ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ .ಸೆಪ್ಟೆಂಬರ್ 27 ರಂದು ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ನಡೆದ ಪ್ರಬಲ ವೈಮಾನಿಕ ದಾಳಿಯಲ್ಲಿ ಇಸ್ರೇಲ್ ನಸ್ರಲ್ಲಾ ಅವರನ್ನು ಕೊಂದಿತು.
ಬುಧವಾರದ ದಾಳಿಯು ಈ ವಾರದಲ್ಲಿ ಈ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಎರಡನೇ ವೈಮಾನಿಕ ದಾಳಿಯಾಗಿದೆ. ಮಂಗಳವಾರ ಬೆಳಿಗ್ಗೆ, ಇಸ್ರೇಲ್ ಬುಧವಾರದ ದಾಳಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಪತ್ರಕರ್ತ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.