
ಉರ್ದುವಿನಲ್ಲಿ ಮಾತನಾಡಿರುವ ನಾಸಿರುದ್ದೀನ್ ಶಾ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತವನ್ನು ಸ್ವಾಗತಿಸಿದವರನ್ನು ಕಟುವಾಗಿ ಟೀಕಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಮರಳಿರುವುದು ಇಡೀ ವಿಶ್ವದ ಪಾಲಿಗೆ ಕಳವಳಕಾರಿ ವಿಚಾರವಾಗಿದ್ದರೂ ಸಹ ಕೆಲ ಭಾರತೀಯ ಮುಸ್ಲಿಮರು ಈ ಅನಾಗರಿಕತೆಯನ್ನೂ ಸಂಭ್ರಮಿಸುತ್ತಿರೋದು ನಿಜಕ್ಕೂ ಅಪಾಯಕಾರಿಯಾಗಿದೆ ಎಂದಿದ್ದಾರೆ.
ತಾಲಿಬಾನಿಗಳಿಗೆ ಬೆಂಬಲ ಸೂಚಿಸಿರುವ ಕೆಲ ಭಾರತೀಯ ಮುಸ್ಲಿಮರು ತಮಗೆ ಸುಧಾರಿತ ಇಸ್ಲಾಂ ಧರ್ಮ ಬೇಕೆ ಅಥವಾ ಅನಾಗರಿಕ ಮೌಲ್ಯಗಳು ಬೇಕೆ ಎಂದು ತಮ್ಮನ್ನ ತಾವು ಪ್ರಶ್ನಿಸಿಕೊಳ್ಳಬೇಕಿದೆ. ನಾನು ಒಬ್ಬ ಭಾರತೀಯ ಮುಸ್ಲಿಂ. ಅನೇಕ ವರ್ಷಗಳ ಹಿಂದೆ ಮಿರ್ಜಾ ಗಾಲಿಬ್ರು ಹೇಳಿರುವಂತೆ ನನ್ನ ಹಾಗೂ ದೇವರ ನಡುವಿನ ಸಂಬಂಧ ಅವಿನಾಭಾವವಾಗಿದೆ. ಇದಕ್ಕಾಗಿ ನನಗೆ ರಾಜಕೀಯ ಧರ್ಮದ ಅವಶ್ಯಕತೆ ಇಲ್ಲ ಎಂದಿದ್ದಾರೆ.
46 ವರ್ಷಗಳ ಸಿನಿ ಜರ್ನಿಯಲ್ಲಿ ನಾಸಿರುದ್ದೀನ್ ಶಾ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಶಾಂತ್, ಜಾನೆ ಭಿ ದೋ ಯಾರೋ, ಮಿರ್ಚ್ ಮಸಾಲಾ. ಇಜ್ಜತ್, ಕರ್ಮ, ವಿಶ್ವಾತ್ಮ, ಮೋಹ್ರಾ, ಸರ್ಫ್ ರೋಶ್, ದಿ ಡರ್ಟಿ ಪಿಕ್ಚರ್, ಕ್ರಿಶ್, ಜಿಂದಗಿ ನಾ ಮಿಲೇಗಿ ದುಬಾರಾ ಇವುಗಳು ನಾಸಿರುದ್ದೀನ್ ಶಾಗೆ ಹೆಸರು ತಂದುಕೊಟ್ಟ ಸಿನಿಮಾಗಳಾಗಿವೆ.