ಹಿರಿಯ ನಟ ನಾಸಿರುದ್ದೀನ್ ಶಾ ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಮೊಘಲರು ನಿರಾಶ್ರಿತರು ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ‘ದಿ ವೈರ್’ ವೆಬ್ ಸೈಟ್ ಯುಟ್ಯೂಬ್ ವಾಹಿನಿಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ನಾಸಿರುದ್ದೀನ್ ಶಾ ನೀಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
ಮೊಘಲರ ಕ್ರೌರ್ಯವೆನ್ನಲಾದ ದುಷ್ಕೃತ್ಯಗಳು ನಿತ್ಯವೂ ಬೆಳಕಿಗೆ ಬರುತ್ತಿದ್ದು, ಮೊಘಲರು ದೇಶಕ್ಕೆ ಕೊಡುಗೆ ನೀಡಿದವರು ಎಂಬುದನ್ನು ನಾವು ಮರೆಯುತ್ತೇವೆ ಎಂದು ಅವರು ಹೇಳುವುದನ್ನು ಕೇಳಬಹುದಾಗಿದೆ.
ಸಂದರ್ಶನದ ವೇಳೆಯಲ್ಲಿ, ಮೊಘಲರು ನಿರಾಶ್ರಿತರಾಗಿದ್ದರು ಎಂದು ನಾಸಿರುದ್ದೀನ್ ಶಾ ಹೇಳುತ್ತಾರೆ. ಮುಂದುವರೆದು ಮಾತನಾಡಿದ ಅವರು, ನೃತ್ಯ, ಸಂಗೀತ, ಚಿತ್ರಕಲೆ, ಸಾಹಿತ್ಯದ ಪರಂಪರೆಗೆ ಕೊಡುಗೆ ನೀಡಿದ ಮೊಘಲರು ದೇಶದಲ್ಲಿ ಶಾಶ್ವತ ಸ್ಮಾರಕಗಳನ್ನು ಬಿಟ್ಟಿದ್ದಾರೆ. ಇದಲ್ಲದೆ, ಮೊಘಲರು ದೇಶವನ್ನು ತಮ್ಮ ತಾಯ್ನಾಡು ಮಾಡಲು ಭಾರತಕ್ಕೆ ಬಂದರು. ನಾವು ಅವರನ್ನು ನಿರಾಶ್ರಿತರು ಎಂದು ಕರೆಯಬಹುದು ಎಂದು ಹೇಳಿದ್ದಾರೆ.
ಇದೇ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ, 71 ವರ್ಷ ವಯಸ್ಸಿನ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆ ಬಗ್ಗೆ ಭಾರೀ ಚರ್ಚೆಯೇ ನಡೆದಿದೆ. ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ದೇಶವನ್ನು ಕೊಳ್ಳೆ ಹೊಡೆದ ತೈಮೂರ್, ಮೊಹಮ್ಮದ್ ಘಜ್ನಿ ಬಗ್ಗೆ ಮಾತಾಡದ ನಾಸಿರುದ್ದೀನ್ ಶಾ ಮೊಘಲರ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಹಿಂದೆ ತಾಲಿಬಾನ್ ಗಳು ಆಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡ ಸಂದರ್ಭದಲ್ಲಿ ಭಾರತದ ಸಂಭ್ರಮಾಚರಣೆ ನಡೆಸಿದ್ದರ ಬಗ್ಗೆ ನಾಸಿರುದ್ಧೀನ್ ಶಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ನಾಸಿರುದ್ದೀನ್ ಶಾ ಮೊಘಲರ ಬಗ್ಗೆ ನೀಡಿದ ಹೇಳಿಕೆ ವಿವಾದವನ್ನುಂಟು ಮಾಡಿದ್ದು ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಕೆಲವು ಅಭಿಪ್ರಾಯಗಳು ಇಲ್ಲಿವೆ.
ಅಂದ ಹಾಗೇ, ಸಂದರ್ಶನದಲ್ಲಿ ನಾಸಿರುದ್ದೀನ್ ಶಾ ಅವರು ಮೊಘಲರನ್ನು ಹೊಗಳಿದ್ದರ ಜೊತೆಗೆ ಅವರ ಕ್ರೌರ್ಯವನ್ನೂ ಬಿಚ್ಚಿಟ್ಟಿದ್ದಾರೆ. ಅವರ ಪೂರ್ಣ ಹೇಳಿಕೆಯನ್ನು ಬಿಟ್ಟು ಅರ್ಧಂಬರ್ಧ ಹೇಳಿಕೆಯ ವಿಡಿಯೋ ಇಟ್ಟುಕೊಂಡು ತರಾಟೆಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
https://twitter.com/rajgopal88/status/1476081368484356098