ನವದೆಹಲಿ: ಬೂಸ್ಟರ್ ಡೋಸ್ ನಂತರ ಮೂಗಿನ ಲಸಿಕೆಯನ್ನು ಪಡೆಯಲು ಶಿಫಾರಸು ಮಾಡುವುದಿಲ್ಲ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥರು ಹೇಳಿದ್ದಾರೆ.
ಈಗಾಗಲೇ ಬೂಸ್ಟರ್ ಡೋಸ್ ಪಡೆದ ಜನರು ಮೂಗಿನ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಮೂಗಿನ ಲಸಿಕೆ ಮೊದಲ ಬೂಸ್ಟರ್ ಆಗಿ ಶಿಫಾರಸು ಮಾಡಲಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಈಗಾಗಲೇ ಬೂಸ್ಟರ್ ಡೋಸ್ ಪಡೆದಿದ್ದರೆ, ಆ ವ್ಯಕ್ತಿಗೆ ಅದನ್ನು ಶಿಫಾರಸು ಮಾಡುವುದಿಲ್ಲ. ಬೂಸ್ಟರ್ ಡೋಸ್ ತೆಗೆದುಕೊಳ್ಳದವರಿಗೆ ನೇಸಲ್ ಡೋಸ್ ಬಳಸಬಹುದು ಎಂದು ಕೇಂದ್ರ ಕೋವಿಡ್ ಟಾಸ್ಕ್ ಫೋರ್ಸ್ ನ ಡಾ.ಎನ್.ಕೆ. ಅರೋರಾ ಹೇಳಿದ್ದಾರೆ.
ನೆರೆಯ ಚೀನಾದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆಯ ಮಧ್ಯೆ, ಸರ್ಕಾರವು ಶುಕ್ರವಾರ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆಯನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಆಗಿ ಅನುಮೋದಿಸಿದೆ.
ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ ಎರಡು ಡೋಸ್‌ಗಳೊಂದಿಗೆ ಲಸಿಕೆಯನ್ನು ಪಡೆದ ವಯಸ್ಕರು ಇದನ್ನು ಮುನ್ನೆಚ್ಚರಿಕೆಯಾಗಿ ಅಥವಾ ಮೂರನೇ ಡೋಸ್ ಆಗಿ ಮಾತ್ರ ತೆಗೆದುಕೊಳ್ಳಬಹುದು.