
ಈ ಸಭೆಯಲ್ಲಿ ತಜ್ಞರ ಸಮಿತಿ ಈಗಾಗಲೇ ಶಿಫಾರಸು ಮಾಡಿರುವ ಮೂಗಿನ ಮೂಲಕ ನೀಡುವ (ನಾಸಲ್ ವ್ಯಾಕ್ಸಿನ್) ಕೊರೊನಾ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಗುರುವಾರ ವಿಡಿಯೋ ಕಾಲ್ ಮೂಲಕ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ, ಗೃಹ ಸಚಿವ ಅಮಿತ್ ಷಾ, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪೌಲ್ ಮೊದಲಾದವರು ಪಾಲ್ಗೊಂಡಿದ್ದರು.
ನಾಸಲ್ ವ್ಯಾಕ್ಸಿನ್ ಪರಿಣಾಮಕಾರಿಯೇ ?
ಚುಚ್ಚುಮದ್ದಿನ ಮೂಲಕ ನೀಡಲಾಗುವ ಇತರೆ ಕೊರೊನಾ ಲಸಿಕೆಗಳಂತೆ ಮೂಗಿನ ಮೂಲಕ ನೀಡುವ ನಾಸಲ್ ವ್ಯಾಕ್ಸಿನ್ ಕೂಡಾ ಅಷ್ಟೇ ಪರಿಣಾಮಕಾರಿಯಾಗಿದೆ. ಅಲ್ಲದೆ ಚುಚ್ಚುಮದ್ದಿಗೆ ಹೆದರುವವರಿಗೆ ಇದು ಹೇಳಿ ಮಾಡಿಸಿದಂತಹ ಔಷಧಿಯಾಗಿದೆ.
ಮತ್ತೊಂದು ಮಹತ್ವದ ಸಂಗತಿ ಎಂದರೆ ಕೊರೊನಾ ಸೋಂಕು ಮೂಗು ಮತ್ತು ಬಾಯಿ ಮೂಲಕ ಹರಡುವ ಕಾರಣ ಮೂಗಿನ ಮೂಲಕ ನೀಡಲಾಗುವ ನಾಸಲ್ ವ್ಯಾಕ್ಸಿನ್, ಮೂಗು ಮತ್ತು ಶ್ವಾಸಕೋಶಕ್ಕೆ ಸೋಂಕಿನಿಂದ ಅತ್ಯುತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ.