ಬರೋಬ್ಬರಿ 124 ಮೈಲಿ ಅಗಲವಿರುವ ಬಾಹ್ಯಾಕಾಶದ ಶಿಲೆ ’ಗೋಲ್ಡ್‌ಮೈನ್ ಕ್ಷುದ್ರಗ್ರಹ’ವು ನಮ್ಮ ಸೌರ ಮಂಡಲದ ಸುತ್ತ ಅಡ್ಡಾಡುತ್ತಿದೆ ಎಂದು ಅಮೆರಿಕದ ನಾಸಾ ತಿಳಿಸಿದೆ.
ಈ ಕ್ಷುದ್ರಗ್ರಹದ ಮೌಲ್ಯ $10,000 ಕ್ವಾಡ್ರಿಲಿಯನ್ (1ರ ಪಕ್ಕ 15 ಸೊನ್ನೆ ಬರೆದುಕೊಳ್ಳಿ) ಎಂದು ಅಂದಾಜಿಸಲಾಗಿದೆ. ಈ ಕ್ಷುದ್ರಗ್ರಹದ ಒಂದೇ ಒಂದು ಸಣ್ಣ ತುಂಡು ಸಹ ಲಕ್ಷಾಂತರ ಕೋಟಿ ಡಾಲರ್‌ಗಳಷ್ಟಾಗಲಿದೆ.
ಸೈಕ್ 16 ಎಂದು ಹೆಸರಿಸಲಾದ ಈ ಕ್ಷುದ್ರಗ್ರಹದ ಕುರಿತು ನಾಸಾ ಅಧ್ಯಯನ ಮಾಡುತ್ತಿದೆ. 2026ರ ವೇಳೆಗೆ ಕ್ಷುದ್ರಗ್ರಹಕ್ಕೆ ತಂಡವೊಂದನ್ನು ಕಳುಹಿಸಿ ಅದರ ಮೂಲದ ಕುರಿತು ಅಧ್ಯಯನ ಮಾಡಲು ನಾಸಾ ಚಿಂತನೆ ನಡೆಸಿದೆ.
ಪುರುಷರು ದಿನಕ್ಕೆ ಒಂದು ಚಮಚ ಮೆಂತ್ಯ ಸೇವಿಸಿ ʼಚಮತ್ಕಾರʼ ನೋಡಿ
ಈ ಕ್ಷುದ್ರಗ್ರಹವು ಸದ್ಯಕ್ಕೆ ಮಂಗಳ ಹಾಗೂ ಗುರು ಗ್ರಹಗಳ ನಡುವಿನ ಕಕ್ಷೆಗಳ ಮಧ್ಯೆ ಇದೆ ಎನ್ನಲಾಗಿದೆ.
ಗ್ರಹವೊಂದರ ಮುರಿದ ತುಂಡೆಂದು ನಂಬಲಾದ ಸೈಕ್ 16 ಅನ್ನು ಮೊದಲ ಬಾರಿಗೆ 1852ರಲ್ಲಿ ಆವಿಷ್ಕಾರ ಮಾಡಲಾಯಿತು. ಸೌರ ಮಂಡಲದ ರಚನೆ ವೇಳೆ ಗ್ರಹವೊಂದು ಘರ್ಷಣೆಗೊಳಪಟ್ಟಾಗ ಬೆಲೆಬಾಳುವ ಲೋಹಗಳ ಗುಚ್ಛವಾದ ಈ ಕ್ಷುದ್ರಗ್ರಹ ತುಂಡಾಗಿ ಬಿತ್ತೆಂದು ವಿಜ್ಞಾನಿಗಳು ಹೇಳುತ್ತಾರೆ.
ಕಬ್ಬಿಣ ಹಾಗೂ ನಿಕ್ಕೆಲ್‌ನಿಂದ ಮಾಡಲ್ಪಟ್ಟ ಸೈಕ್ 16ರಲ್ಲಿ ಕ್ವಾಡ್ರಿಲಿಯನ್ ಡಾಲರ್‌ಗಟ್ಟಲೇ ಮೌಲ್ಯದ ಗಣಿಗಾರಿಕಾ ಮೌಲ್ಯವಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.