ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಹಿಮಾಲಯದ ಅತ್ಯದ್ಭುತ ಫೋಟೋ 05-06-2021 7:52AM IST / No Comments / Posted In: Latest News, Live News, International ನಾಸಾದ ಗಗನಯಾತ್ರಿಯಾಗಿರುವ ಮಾರ್ಕ್ ವಂಡೆ ಹೀ ಎಂಬವರು ಬಾಹ್ಯಾಕಾಶ ನಿಲ್ದಾಣದಿಂದ ಹಿಮಾಲಯದ ಫೋಟೋಗಳನ್ನ ಕ್ಲಿಕ್ಕಿಸಿದ್ದು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಜೂನ್ 2ರಂದು ಈ ಫೋಟೋಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಮಾರ್ಕ್ ಹಿಮಾಲಯದ ಸೌಂದರ್ಯವನ್ನ ಹಾಡಿಹೊಗಳಿದ್ದಾರೆ. ಟ್ವೀಟಿಗರು ಈ ಫೋಟೋಗಳನ್ನ ನೋಡಿ ಫಿದಾ ಆಗಿದ್ದಾರೆ. ಫೋಟೋದಲ್ಲಿ ಹಿಮದಿಂದ ಆವೃತವಾದ ಹಿಮಾಲಯದ ಪರ್ವತವು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಪರ್ವತಗಳ ಹಿಮ ರಾಶಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಿದ್ದು ಹಿಮಾಲಯದ ಅಂದವನ್ನ ಇನ್ನಷ್ಟು ಹೆಚ್ಚಿಸಿದಂತಿದೆ. ಈ ಫೋಟೋ ನೋಡಿದ ಟ್ವೀಟಿಗರು ತರಹೇವಾರಿ ಕಮೆಂಟ್ಗಳನ್ನ ಹಾಕುತ್ತಿದ್ದಾರೆ. ಹಿಮಾಲಯ ತನ್ನದೇ ಆದ ರೀತಿಯಲ್ಲಿ ವ್ಯಕ್ತಿಯ ಆತ್ಮವನ್ನ ಸ್ಪರ್ಶಿಸುವ ಸಾಮರ್ಥ್ಯ ಹೊಂದಿದೆ ಎಂದು ಟ್ವೀಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕರು ಈ ಫೋಟೋವನ್ನ ನೋಡ್ತಿದ್ರೆ ನೈಟ್ರೋಜನ್ ಐಸ್ಕ್ರೀಂ ನೆನಪಾಗುತ್ತಿದೆ ಎಂದು ಹೇಳಿದ್ದಾರೆ. Somewhere on a clear, bright day in the Himalayas. I can’t get enough views like this. pic.twitter.com/1QNylAIqAF — Mark T. Vande Hei (@Astro_Sabot) June 2, 2021