ನಾರೀಶಕ್ತಿಯನ್ನು ಪರಿಚಯಿಸುವ ಟ್ವೀಟ್ ಒಂದನ್ನು ರೈಲ್ವೇ ಸಚಿವ ಪಿಯೂಶ್ ಗೋಯೆಲ್ ಶೇರ್ ಮಾಡಿಕೊಂಡಿದ್ದಾರೆ.
ದೈಹಿಕವಾಗಿ ಸಾಕಷ್ಟು ದಣಿಸಬಹುದಾದ ಕೆಲಸಗಳು ಮಹಿಳೆಯರಿಗಲ್ಲ ಎನ್ನುವ ನಂಬಿಕೆಯನ್ನು ತೊಲಗುವಂತೆ ಮಾಡುವ ನಿದರ್ಶನವೊಂದರ ವಿಡಿಯೋವೊಂದನ್ನು ಗೋಯೆಲ್ ಶೇರ್ ಮಾಡಿಕೊಂಡಿದ್ದಾರೆ.
ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ
ಮಹಾರಾಷ್ಟ್ರದಲ್ಲಿ ಸಾಗುವ ಸಾರಿಗೆ ಸಾಗಾಟದ ರೈಲುಗಳ ಚಾಲನಾ ಪರೀಕ್ಷೆ ಮಾಡಲು ಎಲ್ಲಾ ಮಹಿಳೆಯರೇ ಇರುವ ತಂಡವೊಂದನ್ನು ರಚಿಸಲಾಗಿದೆ. ಈ ತಂಡವು ಗೇರ್, ಏರ್-ಬ್ರೇಕ್, ಅಂಡರ್‌ಫ್ರೇಂಗಳು, ಸೈಡ್‌ಪ್ಯಾನೆಲ್‌ಗಳು ಹಾಗೂ ಸಾರಿಗೆ ರೈಲುಗಳ ರೇಕ್‌ಗಳ ಗತಿಯನ್ನು ಪರಿಶೀಲಿಸಿ ನೋಡುವ ಕಠಿಣ ಜವಾಬ್ದಾರಿಯನ್ನು ಈ ಮಹಿಳಾ ತಂಡಕ್ಕೆ ನೀಡಲಾಗಿದೆ.
ಬ್ಲಾಕ್ ಫಂಗಸ್: ನಿಮ್ಮೆಲ್ಲಾ ಪ್ರಶ್ನೆಗಳಿಗೆ ಡಾ. ರಾಜು ನೀಡಿದ್ದಾರೆ ಉತ್ತರ
ಈ ವಿಡಿಯೋವನ್ನು 65,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನಿಜವಾದ ಮಹಿಳಾ ಸಬಲೀಕರಣಕ್ಕೆ ಇದೊಂದು ನಿದರ್ಶನ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.