ಮುಂಬೈ: ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪುಣೆಯ ವಿಶೇಷ ಯುಎಪಿಎ ಕೋರ್ಟ್ ತೀರ್ಪು ಪ್ರಕಟಿಸಿದೆ.
ನರೇಂದ್ರ ದಾಭೋಲ್ಕರ್ ಹತ್ಯೆ ಕೇಸ್ ನಲ್ಲಿ ಶೂಟರ್ ಗಳಾದ ಶರದ್ ಕಲಾಸ್ಕರ್ ಹಾಗೂ ಸಚಿನ್ ಅಂದುರೆ ದೋಷಿಗಳಾಗಿದ್ದು, ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಇನ್ನುಳಿದ ಮೂವರು ಆರೋಪಿಗಳಾದ ವೀರೇಂದ್ರ ಸಿನ್ಹಾ ತಾವಡೆ, ಸಂಜೀವ್ ಪುನಾಲೇಕರ್ ಹಾಗೂ ವಿಕ್ರಂ ಭಾವೆ ವಿರುದ್ಧ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣಕ್ಕೆ ಮೂವರನ್ನು ಖುಲಾಸೆಗೊಳಿಸಲಾಗಿದೆ.
2013 ಅಕ್ಟೋಬರ್ 10ರಂದು ನರೇಂದ್ರ ದಾಭೋಲ್ಕರ್ ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿತ್ತು.