ಬೆಂಗಳೂರು: ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೇ 24 ರವರೆಗೆ ನರೇಗಾ ಕೆಲಸವನ್ನು ಸ್ಥಗಿತಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಮೇ 24ರ ವರೆಗೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಹೆಚ್ಚು ಜನ ಗುಂಪುಗೂಡಬಾರದೆಂದು ಆದೇಶ ಹೊರಡಿಸಲಾಗಿದೆ. ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಜನ ತೆರಳಿದ್ದು, ಬಹುತೇಕರು ನರೇಗಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳ ಆತಂಕ ಹಿನ್ನೆಲೆಯಲ್ಲಿ ಮೇ 24ರ ವರೆಗೆ ನರೇಗಾ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ ನಿಂದ ಜೂನ್ ವರೆಗೆ ನರೇಗಾ ಯೋಜನೆಯಡಿ ಹೆಚ್ಚು ಕೆಲಸ ನಡೆಯುತ್ತದೆ. ಹೆಚ್ಚು ಜನ ಸೇರುವ ಅಪಾಯವಿದ್ದು ಒಬ್ಬರಿಗೆ ಸೋಂಕು ತಗುಲಿದರೆ ಗ್ರಾಮೀಣ ಪ್ರದೇಶದಲ್ಲಿ ಆತಂಕ ಹೆಚ್ಚುತ್ತದೆ. ಹಾಗಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ನರೇಗಾ ಕೆಲಸವಿಲ್ಲದಿದ್ದರೂ ಗ್ರಾಮಪಂಚಾಯಿತಿಗಳು ಬೇಡಿಕೆಗೆ ಅನುಸಾರ ಅರ್ಜಿ ಸ್ವೀಕರಿಸಬೇಕು. ಮೇ 25 ರ ನಂತರ ಕೆಲಸ ನೀಡಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.