ಬೆಂಗಳೂರು: ಕೇಂದ್ರ ಸರ್ಕಾರದಿಂದ ಉದ್ಯೋಗ ಖಾತರಿ ಯೋಜನೆಯಡಿ 50 ದಿನ ಹೆಚ್ಚುವರಿ ಕೆಲಸ ನೀಡಲು ಅನುಮತಿ ನೀಡಲಾಗಿದೆ.
ರಾಜ್ಯದ 17 ಪ್ರವಾಹ ಪೀಡಿತ ಜಿಲ್ಲೆಗಳ 99 ತಾಲೂಕುಗಳ ಉದ್ಯೋಗ ಖಾತರಿ ಯೋಜನೆ ಕೂಲಿ ಕಾರ್ಮಿಕರಿಗೆ 50 ದಿನ ಹೆಚ್ಚುವರಿ ಕೆಲಸ ನೀಡಲಾಗುವುದು. ರಾಜ್ಯದ ಮನವಿಯನ್ನು ಪರಿಗಣಿಸಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಕೂಲಿ ಕೆಲಸವಿಲ್ಲದೆ ಕಂಗಾಲಾಗಿದ್ದ ಕಾರ್ಮಿಕರಿಗೆ 100 ದಿನದ ಜೊತೆಗೆ ಹೆಚ್ಚುವರಿಯಾಗಿ 50 ದಿನ ಕೆಲಸ ನೀಡಲಾಗುವುದು.
ಬಾಗಲಕೋಟೆ, ಹಾವೇರಿ, ಧಾರವಾಡ, ವಿಜಯಪುರ, ಗದಗ, ವಿಜಯನಗರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ, ಉತ್ತರಕನ್ನಡ, ಹಾಸನ, ಶಿವಮೊಗ್ಗ, ಕಲ್ಬುರ್ಗಿ, ಬೀದರ್, ಯಾದಗಿರಿ, ಕೊಡಗು, ಬೆಳಗಾವಿ ಸೇರಿ 17 ಜಿಲ್ಲೆಗಳ 99 ತಾಲೂಕಿನ ಲಕ್ಷಾಂತರ ಕಾರ್ಮಿಕರಿಗೆ 50 ದಿನ ಹೆಚ್ಚುವರಿ ಕೆಲಸ ನೀಡಲಾಗುವುದು ಎನ್ನಲಾಗಿದೆ.