ಬೆಂಗಳೂರು: ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘ ಯೋಜನೆಯಡಿ 1,754 ಗುಂಪುಗಳಿಗೆ ತಲಾ 10 ಸಾವಿರ ರೂಪಾಯಿ ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯಿತಿನಲ್ಲಿ ಒಂದೊಂದು ಆದ್ಯತಾ ಗುಂಪು ರಚಿಸಲಾಗಿದ್ದು, ಇನ್ನೊಂದು ವಾರದಲ್ಲಿ ನೋಂದಣಿಯಾದ ಎಲ್ಲಾ ಗುಂಪುಗಳಿಗೆ ಸುತ್ತು ನಿಧಿ ಬಿಡುಗಡೆ ಮಾಡಲಾಗುವುದು.
ವಾರದೊಳಗೆ ಎರಡನೇ ಹಂತದಲ್ಲಿ ಪ್ರತಿ ಪಂಚಾಯಿತಿಗೆ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಹಕ್ಕು ಬಾಧ್ಯತಾ ಗುಂಪುಗಳ ರಚನಾ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಸಚಿವ ಡಾ.ಕೆ.ಸಿ. ನಾರಾಯಣ ಗೌಡ ತಿಳಿಸಿದ್ದಾರೆ.
ಪ್ರತಿ ಗುಂಪಿಗೂ ತಲಾ 10 ಸಾವಿರ ರೂಪಾಯಿ ಸುತ್ತು ನಿಧಿ, ಯೋಜನಾ ಚಟುವಟಿಕೆಗಾಗಿ 5 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಸೌಲಭ್ಯ, 1 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಈಗಾಗಲೇ 85 ಯೋಜನಾ ವರದಿಗಳನ್ನು ತಯಾರಿಸಿ http://sysykar.in ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ. ರಚನೆಯಾದ ಯುವ ಸ್ವಸಹಾಯ ಗುಂಪುಗಳು ಇದರ ಸದುಪಯೋಗ ಪಡೆಯಲು ತಿಳಿಸಲಾಗಿದೆ.