ಬೆಂಗಳೂರು : ಯುಕೆಯ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದು, ಅವರು ತಮ್ಮ ತಂದೆ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರೊಂದಿಗೆ ನಗರದ ಜನಪ್ರಿಯ ಐಸ್ ಕ್ರೀಮ್ ಜಾಯಿಂಟ್ ಗೆ ಭೇಟಿ ನೀಡಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿರುವ ಐಕಾನಿಕ್ ಕಾರ್ನರ್ ಹೌಸ್ ನಲ್ಲಿ ನಾರಾಯಣ ಮೂರ್ತಿ ಅವರೊಂದಿಗೆ ಅಕ್ಷತಾ ಮೂರ್ತಿ ಐಸ್ ಕ್ರೀಮ್ ಸವಿದಿದ್ದಾರೆ. ಕ್ಯಾಶುಯಲ್ ಬಟ್ಟೆಗಳನ್ನು ಧರಿಸಿದ ತಂದೆ-ಮಗಳು ಇಬ್ಬರೂ ಕೈಯಲ್ಲಿ ಐಸ್ ಕ್ರೀಮ್ ಕಪ್ ಗಳೊಂದಿಗೆ ಫೋಟೋಗೆ ಪೋಸ್ ನೀಡಿದರು.
ಫೆಬ್ರವರಿ 10 ರಂದು, ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ ಪುಸ್ತಕ ” “An Uncommon Love: The Early Life of Sudha and Narayana Murthyʼ ಬಿಡುಗಡೆ ಸಮಾರಂಭದಲ್ಲಿ ಇಡೀ ಕುಟುಂಬ ಹಾಜರಿದ್ದರು. ನಾರಾಯಣ ಮೂರ್ತಿ, ಪತ್ನಿ ಸುಧಾ ಮೂರ್ತಿ ಮಗ ರೋಹನ್ ಮೂರ್ತಿ ಅಕ್ಷತಾ ಮತ್ತು ಅವರ ಪುತ್ರಿಯರಾದ ಅನೌಷ್ಕಾ ಮತ್ತು ಕೃಷ್ಣ ಅವರೊಂದಿಗೆ ಹಾಜರಿದ್ದರು.