ಮಂಡ್ಯ : ಶೀಘ್ರದಲ್ಲೇ ಕೆ.ಸಿ ನಾರಾಯಣ ಗೌಡರು ಕಾಂಗ್ರೆಸ್ ಸೇರ್ತಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾವುದೇ ಕಂಡೀಷನ್ ಇಲ್ಲ, ಪಕ್ಷದ ಸಿದ್ದಾಂತಗಳಿಗೆ ಒಪ್ಪಿ ಗೌರವ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಸುಮಲತಾ ಜೊತೆ ನಾವು ಚೆನ್ನಾಗಿದ್ದೇವೆ, ಕುಮಾರಸ್ವಾಮಿ ತಪ್ಪು ಮಾಡುತ್ತಿದ್ದಾರೆ, ಕೊನೆ ಕ್ಷಣದಲ್ಲಿ ಹೆಚ್ಡಿಕೆ ರಾಮನಗರ ತಿರಸ್ಕಾರ ಮಾಡುತ್ತಾರೋ, ಅಥವಾ ಅರ್ಧಕ್ಕೆ ಬಿಟ್ಟು ಬರುತ್ತಾರೋ ಗೊತ್ತಿಲ್ಲ, ಬೇರೆಯವರಿಗೆ ಅವರು ಅವಕಾಶ ನೀಡುತ್ತಿಲ್ಲ ಎಂದರು.
ಮಂಡ್ಯದಲ್ಲಿ ಸುಮಲತಾ ಬಿಜೆಪಿ ಟಿಕೆಟ್ ಸಿಗುತ್ತದೆ ಅಂತ ಅಂದಿಕೊಂಡಿದ್ದರು, ಆದರೆ ಆಗಿದ್ದೇ ಬೇರೆ. ಯಾರನ್ನಾದರೂ ನಿಲ್ಲಿಸಲಿ. ಮುಂದೇನಾಗುತ್ತದೆ ಕಾದು ನೋಡೋಣ ಎಂದರು.