ಹದಗೆಟ್ಟ ರಸ್ತೆ ಮತ್ತು ಜಲಾವೃತ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ದಾಖಲಿಸಲು ಆಗ್ರಾ ನಿವಾಸಿಗಳು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ.
ಭಾರೀ ಮಳೆಯ ನಂತರ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳು ಜಲಾವೃತ ಸಮಸ್ಯೆಗಳಿಂದ ಹೆಣಗಾಡುತ್ತಿವೆ. ನಿರಾಶೆಗೊಂಡ ಸ್ಥಳೀಯರು ತಮ್ಮ ಕಾಲೋನಿಗಳನ್ನು “ಮರು ನಾಮಕರಣ” ಮಾಡುವ ಫಲಕಗಳನ್ನು ಹಾಕಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನರಕ್ ಪುರಿ, ಕೀಚದ್ ನಗರ, ಘಿನೋನಾ ನಗರ, ಬದ್ಬು ವಿಹಾರ್, ನಳ ಸರೋವರ ಮತ್ತು ಮುಂತಾದ ಹೆಸರಿನ ಫಲಕಹಾಕಿದ್ದಾರೆ.
ಸ್ಥಳೀಯರೊಬ್ಬರು ಎಎನ್‌ಐಗೆ ದೂರು ನೀಡಿದ್ದರೂ ಇನ್ನೂ ಯಾವುದೇ ಸಹಾಯವನ್ನು ಜಿಲ್ಲಾಡಳಿತದಿಂದ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಾಯ ಸಿಕ್ಕಿಲ್ಲ. ಸಂಸದರು, ಶಾಸಕರು, ಸಂಬಂಧಪಟ್ಟ ಇಲಾಖೆಗಳು ಸೇರಿದಂತೆ ಎಲ್ಲೆಡೆ ದೂರು ನೀಡಿದ್ದೇವೆ, ಆದರೆ ಎಲ್ಲವೂ ವ್ಯರ್ಥವಾಗಿದೆ. ರಾಜಕಾರಣಿಗಳು ಕೇವಲ ಮತಕ್ಕಾಗಿ ಇಲ್ಲಿಗೆ ಬರುತ್ತಾರೆ ಮತ್ತು ನಂತರ ಕಣ್ಮರೆಯಾಗುತ್ತಾರೆ ಎಂದು ಆರೋಪಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪಶ್ಚಿಮ ಉತ್ತರ ಪ್ರದೇಶದ ಹಲವಾರು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ನೀಡಿತು.
ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಲಕ್ನೋ, ಅಲಿಗಢ, ಆಗ್ರಾ, ಇಟಾಹ್, ಮೈನ್‌ಪುರಿ, ಫಿರೋಜಾಬಾದ್ ಮತ್ತು ಕಾನ್ಪುರ ಜಿಲ್ಲೆಗಳಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.