ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಳಸಿದ್ದ ನೆಪೋಲಿಯನ್ ಬೊನಪಾರ್ಟೆಯ ಎರಡು ಪಿಸ್ತೂಲ್‌ಗಳನ್ನು ಭಾನುವಾರ ಫ್ರಾನ್ಸ್‌ನಲ್ಲಿ ಮಾರಾಟ ಮಾಡಲಾಗಿದೆ. ಹರಾಜಿನಲ್ಲಿ ಈ ಪಿಸ್ತೂಲ್ ಗಳನ್ನು 1.69 ಮಿಲಿಯನ್ ಯುರೋಗಳಿಗೆ ಮಾರಾಟ ಮಾಡಲಾಗಿದೆ.
ಪ್ಯಾರಿಸ್‌ನ ದಕ್ಷಿಣದಲ್ಲಿರುವ ಫಾಂಟೈನ್‌ಬ್ಲೂನಲ್ಲಿ ನಡೆದ ಹರಾಜಿನಲ್ಲಿ ಖರೀದಿದಾರನ ಗುರುತನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಆದರೆ ಶುಲ್ಕದೊಂದಿಗೆ ಅಂತಿಮ ಮಾರಾಟದ ಬೆಲೆ 1.2-1.5 ಮಿಲಿಯನ್ ಯುರೋಗಳ ಅಂದಾಜನ್ನು ಮೀರಿದೆ. ಶಸ್ತ್ರಾಸ್ತ್ರ ಮಾರಾಟಕ್ಕೆ ಮುಂಚಿತವಾಗಿ, ಫ್ರೆಂಚ್ ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಸಂಪತ್ತು ಆಯೋಗವು ವಸ್ತುಗಳನ್ನು ರಾಷ್ಟ್ರೀಯ ಸಂಪತ್ತು ಎಂದು ವರ್ಗೀಕರಿಸಿದೆ. ಅಲ್ಲದೆ ಇದರ ರಫ್ತನ್ನು ನಿಷೇಧಿಸಲಾಗಿದೆ.
ಚಿನ್ನ ಮತ್ತು ಬೆಳ್ಳಿಯ ಹೊದಿಕೆಯಿಂದ ಅಲಂಕೃತವಾದ ಬಂದೂಕುಗಳ ಮೇಲೆ ನೆಪೋಲಿಯನ್ ಅವರ ರಾಜ ವೈಭವದ ಕೆತ್ತನೆಯನ್ನು ನೋಡಬಹುದು. ಫ್ರೆಂಚ್ ಅಭಿಯಾನದ ಸೋಲಿನ ನಂತರ, ಅವರು ಸಂಪೂರ್ಣವಾಗಿ ಖಿನ್ನತೆಗೆ ಒಳಗಾದರು ಮತ್ತು ಈ ಶಸ್ತ್ರಾಸ್ತ್ರಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದರು. ಆದರೆ ಅವರ ಅಜ್ಜ ತಡೆದಿದ್ದರು. ಇದಾದ್ಮೇಲೆ ನೆಪೋಲಿಯನ್ ವಿಷ ಸೇವನೆ ಮಾಡಿದ್ದರು. ಆದ್ರೆ ವಾಂತಿ ಮಾಡಿಸಿ ಅವರನ್ನು ರಕ್ಷಿಸಲಾಯಿತು. ನಿಷ್ಠೆಗೆ ಧನ್ಯವಾದ ಹೇಳಲು ಪಿಸ್ತೂಲ್ ಅನ್ನು ನೆಪೋಲಿಯನ್ ತಮ್ಮ ಒಡನಾಡಿಗೆ ನೀಡಿದ್ದರು. ಪದತ್ಯಾಗದ ನಂತರ, ನೆಪೋಲಿಯನ್ ಇಟಲಿಯ ಕರಾವಳಿಯ ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯ್ತು. ಮತ್ತೆ ಫ್ರಾನ್ಸ್‌ಗೆ ಮರಳಿದ್ರೂ 1815 ರಲ್ಲಿ ವಾಟರ್‌ಲೂ ಕದನದಲ್ಲಿ ಬ್ರಿಟಿಷರಿಂದ ಸೋಲಿಸಲ್ಪಟ್ಟಾಗ ಅವರ ವೃತ್ತಿಜೀವನ ಕೊನೆಗೊಂಡಿತು.