
ಶಿವಮೊಗ್ಗ: ನಂಜಪ್ಪ ಆಸ್ಪತ್ರೆಗಳ ಸಮೂಹದಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕರಿಗೆ ವಿಶೇಷ ಕೊಡುಗೆ ಘೋಷಿಸಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಲ್ಯಾಬ್ ಪರೀಕ್ಷೆಗಳ ಮೇಲೆ ಶೇಕಡ 25ರಷ್ಟು ರಿಯಾಯಿತಿ ನೀಡಲಾಗುವುದು. ಇಸಿಜಿ, ಇಕೋ, ಟಿಎಂಟಿ, ಸಿಟಿ, ಎಂಆರ್ಐ, ಅಲ್ಟ್ರಾ ಸೌಂಡ್ ಮತ್ತು ಮ್ಯಾಮೊಗ್ರಾಫಿ ಮೇಲೆ ಶೇಕಡ 15 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಮತದಾನ ಮಾಡಿದ ಗುರುತನ್ನು ತೋರಿಸಿ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಶಿವಮೊಗ್ಗದ ನಂಜಪ್ಪ ಮತ್ತು ನಂಜಪ್ಪ ಲೈಫ್ ಕೇರ್ ನಲ್ಲಿ ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ಈ ರಿಯಾಯಿತಿ ಸೌಲಭ್ಯ ಇರುತ್ತದೆ. ಲ್ಯಾಬ್ ಪರೀಕ್ಷೆಗಳ ಶುಲ್ಕದಲ್ಲಿ ಮೇ 7 ರಿಂದ 14ರ ವರೆಗೆ ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬಹುದು.
ಲೋಕಸಭೆ ಚುನಾವಣೆಯಲ್ಲಿ ಮತದಾನದ ಜಾಗೃತಿಗಾಗಿ ಈ ಕೊಡುಗೆ ನೀಡಲಾಗಿದೆ. ಮತದಾನ ಮಾಡಿದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜಪ್ಪ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಮನವಿ ಮಾಡಲಾಗಿದೆ.