
ಮೈಸೂರು: ಶ್ರೀಕಂಠೇಶ್ವರ ವಿಗ್ರಹದ ಮೇಲೆ ನೀರೆರಚಿದ ಪ್ರಕರಣ ಖಂಡಿಸಿ ಜನವರಿ 4ರಂದು ನಂಜನಗೂಡು ತಾಲೂಕು ಬಂದ್ ಗೆ ಭಕ್ತರು ಕರೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಅಂದಕಾಸುರ ಸಂಹಾರದ ವೇಳೆ ಕೆಲ ದಿನಗಳ ಹಿಂದೆ ಶ್ರೀಕಂಠೇಶ್ವರ ವಿಗ್ರಹದ ಮೇಲೆ ನೀರೆರಚಿದ ಪ್ರಕರಣ ನಡೆದಿತ್ತು. ಘಟನೆಯ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಇದೀಗ ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನ ಶ್ರೀಕಂಠೇಶ್ವರ ಭಕ್ತರು ಜನವರಿ 4ರಂದು ನಂಜನಗೂಡು ಬಂದ್ ಗೆ ಕರೆ ನೀಡಿದ್ದಾರೆ.