alex Certify ಮದುಮಗಳ ಜತೆ ಅಜ್ಜಿಗೂ ಮೇಕಪ್​: ಕ್ಯೂಟ್​ ವಿಡಿಯೋ ವೈರಲ್​- ನೆಟ್ಟಿಗರಿಂದ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಗಳ ಜತೆ ಅಜ್ಜಿಗೂ ಮೇಕಪ್​: ಕ್ಯೂಟ್​ ವಿಡಿಯೋ ವೈರಲ್​- ನೆಟ್ಟಿಗರಿಂದ ಮೆಚ್ಚುಗೆ

ಎಷ್ಟೋ ಮಂದಿಯ ಜೀವನದಲ್ಲಿ ಅಮ್ಮನಿಗಿಂತಲೂ ಹೆಚ್ಚಾಗಿ ಅಜ್ಜಿಗೇ ಸ್ಥಾನಮಾನ ಜಾಸ್ತಿ. ಅಜ್ಜಿಯಂದಿರೂ ಅಷ್ಟೇ. ಮಕ್ಕಳಿಗಿಂತಲೂ ಹೆಚ್ಚು ಇಷ್ಟಪಡುವುದು ಮೊಮ್ಮಕ್ಕಳನ್ನು. ಹೀಗಿದೆ ಅಜ್ಜಿ-ಮೊಮ್ಮಕ್ಕಳ ಪ್ರೀತಿ. ಮೊಮ್ಮಗಳ ಮದುವೆಯಲ್ಲಿ ಅಜ್ಜಿಗೂ ಶೃಂಗಾರ ಮಾಡಿರುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ಗಳಿಸಿದೆ.

ಮೇಕಪ್ ಕಲಾವಿದೆ ಜಾಸ್ಮೀನ್ ಕೌರ್ ಅವರು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಐಸೆ ಪ್ಯಾರೆ ಪ್ಯಾರೆ ಕ್ಲೈಂಟ್ಸ್ ಬಹೂತ್​ ಮುಷ್ಕಿಲ್ ಸೆ ಮಿಲ್ತೆ ಹೈ ಜೋ ಇತ್ನಿ ಸಾರಿ ಆಶೀರ್ವಾದ ದೇತೆ ಹೈ ಪ್ಯಾರ್ ಕೆ ಸಾಥ್ (ಇಂಥ ಗ್ರಾಹಕರು ತುಂಬಾ ಅಪರೂಪವಾಗಿ ಸಿಗುತ್ತಾರೆ, ಪ್ರೀತಿಯ ಜತೆ ಇಷ್ಟೊಂದು ಆಶೀರ್ವಾದ ನೀಡುವ ಗ್ರಾಹಕರು ಸಿಗುವುದು ಅಪರೂಪ) ಎಂದು ಅವರು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಮದುಮಗಳ ಅಜ್ಜಿಗೆ ಮೇಕಪ್​ ಮಾಡಲಾ ಎಂದು ಮೇಕಪ್​ ಕಲಾವಿದೆ ಕೇಳಿದಾಗ, ಆಕೆ ಬೇಡಪ್ಪಾ ಬೇಡ ನಾನು ಹಾಗೆಯೇ ಚೆನ್ನಾಗಿದ್ದೇನೆ ಎನ್ನುತ್ತಾರೆ. ಆದರೆ ಕೊನೆಗೆ ಅಜ್ಜಿಗೂ ಲೆಹಂಗಾ ತೊಡಿಸಿ ಸ್ವಲ್ಪ ಮೇಕಪ್​ ಮಾಡಿ ಆಕೆಯನ್ನು ಶೃಂಗಾರ ಮಾಡಿರುವುದು ವಿಡಿಯೋದಲ್ಲಿ ನೋಡಬಹುದು.

ಮೊದಲಿಗೆ ಮೇಕಪ್​ ಬೇಡ ಎನ್ನುವ ಅಜ್ಜಿ, ಕೊನೆಗೆ ಸ್ವಲ್ಪ ಮಾಡಿ ಎಂದಾಗ ಅವರಿಗೆ ಸ್ವಲ್ಪ ಮೇಕಪ್​ ಮಾಡಲಾಗಿದೆ. ಈ ಮೇಕಪ್​ನಿಂದ ಖುಷಿಯಾಗಿರುವ ಅಜ್ಜಿ ಮೊಮ್ಮಗಳಿಗೆ ಹಾಗೂ ಮೇಕಪ್​ ಕಲಾವಿದೆಗೆ ಮುತ್ತು ಕೊಡುವುದು ಕಾಣಬಹುದು. ಅಜ್ಜಿಯ ಸಂತೋಷಕ್ಕೆ ಹಾಗೂ ಮೇಕಪ್​ ಕಲಾವಿದೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ವಯಸ್ಸಾದರೂ ಎಷ್ಟೊಂದು ಉತ್ಸಾಹಭರಿತವಾಗಿ ಇರಬಹುದು ಎನ್ನುವುದು ಈ ಅಜ್ಜಿ ತೋರಿಸಿಕೊಡುತ್ತಿದ್ದಾಳೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...