ರಾಮನಗರ : ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಂದಿನಿ ಹಾಲಿನ ದರ ಹೆಚ್ಚಳ ಮಾಡುತ್ತೇವೆ, ಹೆಚ್ಚು ಮಾಡಿದ ಹಾಲಿನ ದರ ರೈತರಿಗೆ ಹೋಗಬೇಕು. ನಂದಿನಿ ಹಾಲಿನ ದರ ಸಂಬಂಧ ಮತ್ತೊಮ್ಮೆ ಸಭೆ ಕರೆದು ಹಾಲಿನ ದರ ಹೆಚ್ಚಳದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಹೊಸಪೇಟೆ ಸರ್ಕಲ್ ನಲ್ಲಿ ಇಂದು ಹಮ್ಮಿಕೊಂಡಿದ್ದ “ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಇತ್ತೀಚೆಗೆ ನಂದಿನಿ ಹಾಲಿನ ದರ ಲೀ.ಗೆ 2.10 ರೂ ಹೆಚ್ಚಳ ಮಾಡಲಾಗಿತ್ತು. ಪ್ರತಿ ಲೀಟರ್ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿತ್ತು.