ಬೆಂಗಳೂರು: ಕೆಎಂಎಫ್ ನಿಂದ ನಂದಿನಿ ದೇಸಿ ಹಸುವಿನ ತುಪ್ಪ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಲಭ್ಯ ಇರುವ ನಾಟಿ ಹಸುಗಳ ಹಾಲಿನಿಂದ ತುಪ್ಪ ತಯಾರಿಸಿ ಕೆಎಂಎಫ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲ ಹಂತವಾಗಿ ನಂದಿನಿ ದೇಸಿ ಹಸು ತುಪ್ಪ ಇ- ಕಾಮರ್ಸ್ ಅಥವಾ ಆನ್ಲೈನ್ ಮೂಲಕ ಮಾರಾಟವಾಗಲಿದೆ.
ಪ್ರಸ್ತುತ ನಂದಿನಿ ದೇಸಿ ಹಸುವಿನ ತುಪ್ಪ 200 ಮಿಲಿ ಮತ್ತು 500 ಮಿಲಿ ಬಾಟಲ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, 500 ಮಿಲಿ ಬಾಟಲ್ ಗೆ 900 ರೂ., 200 ಮಿಲಿ ಬಾಟಲ್ ಗೆ 400 ರೂ. ದರ ನಿಗದಿಪಡಿಸಲಾಗಿದೆ. ಗಿರ್, ಶಾಹೀವಾಲ್, ಅಮೃತ್ ಮಹಲ್, ಹಳ್ಳಿಕಾರ್ ದೇಸಿ ಹಸುಗಳ ಹಾಲನ್ನು ತುಪ್ಪ ತಯಾರಿಕೆಗೆ ಬಳಸಲಾಗುತ್ತದೆ. ಈ ಹಾಲಿನಲ್ಲಿ ಸರಾಸರಿ ಶೇಕಡ 4.8ರಷ್ಟು ಜಿಡ್ಡಿನ ಅಂಶವಿರುತ್ತದೆ. ಒಂದು ಲೀಟರ್ ದೇಸಿ ಹಸುವಿನ ಹಾಲಿಗೆ 57.85 ರೂ. ದರ ನಿಗದಿಪಡಿಸಲಾಗಿದೆ.