
ಅದೇನೆಂದರೆ, ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಅವರು ದೇವರಕೊಂಡ ಎದುರು ಸಿನಿಮಾದಲ್ಲಿ ಬಾಕ್ಸಿಂಗ್ ಮಾಡುತ್ತಾ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಜತೆಗೆ ಟೈಸನ್‌ಗೆ ತೆಲುಗು ಹಾಗೂ ಇತರ ಭಾಷೆಗಳಲ್ಲಿ ಧ್ವನಿ ನೀಡುತ್ತಿರುವವರು ತೆಲುಗಿನ ಹಿರಿಯ ನಟ ‘ನಂದಮೂರಿ ಬಾಲಕೃಷ್ಣ ‘ ಅವರು.
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅರೆಸ್ಟ್: ಲಖಿಂಪುರ್ ಖೇರಿಗೆ ರಾಹುಲ್, ಪ್ರಿಯಾಂಕಾ
ಈಗಾಗಲೇ ತಮ್ಮ ಬಹುನಿರೀಕ್ಷಿತ ಚಿತ್ರ ’ಅಖಂಡಾ’ ಶೂಟಿಂಗ್ ಮುಗಿಸಿರುವ ಬಾಲಯ್ಯ ಅವರು, ಲೈಗರ್ ಸಿನಿಮಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಫೋಟೊ ಹಾಕಿದ್ದ ದೇವರಕೊಂಡ ’ಜೈ ಬಾಲಯ್ಯ’ ಎಂದು ಟ್ವೀಟ್ ಮಾಡಿದ್ದರು.
1242 ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್, ಕೆಎಟಿ ಮಧ್ಯಂತರ ತಡೆಯಾಜ್ಞೆ
ತೆಲುಗಿನ ಖ್ಯಾತ ನಟಿ ಚಾರ್ಮಿ ಕೌರ್ ಅವರು ಲೈಗರ್‌ಗೆ ಸಹ ನಿರ್ಮಾಪಕಿ ಆಗಿದ್ದಾರೆ. ಕಳೆದ ತಿಂಗಳು ಸಿನಿಮಾ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ತುಣುಕನ್ನು ಹರಿಬಿಟ್ಟಿದ್ದ ದೇವರಕೊಂಡ, ‘ಬ್ಯಾಡೆಸ್ಟ್ ಮ್ಯಾನ್ ಆನ್ ಅರ್ತ್ ‘ ಎಂಬ ಖ್ಯಾತಿಯ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ಅವರು ನಮ್ಮ ಲೈಗರ್ ತಂಡ ಸೇರುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದರು.
ಭಾರತದ ಸಿನಿಮಾ ಪರದೆಯ ಮೇಲೆ ಮೊದಲ ಬಾರಿಗೆ ಬಾಕ್ಸಿಂಗ್ ದಂತಕತೆ ಟೈಸನ್ ಕಾಣಿಸಿಕೊಳ್ಳುತ್ತಿರುವುದು ಚಿತ್ರರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಲೈಗರ್ ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ಕೂಡ ಹೆಚ್ಚಿಸಿದೆ.