ಟಾಲಿವುಡ್ ನ ಹಿರಿಯ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷಗಳಾಗಿದ್ದು, ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಸ್ಪೆಷಲ್ ಡಿಪಿ ಒಂದನ್ನು ಬಿಡುಗಡೆ ಮಾಡಿದ್ದಾರೆ. 1974 ಆಗಸ್ಟ್ 30ರಂದು ತೆರೆಕಂಡ ಎನ್ ಟಿ ರಾಮರಾವ್ ನಟಿಸಿ ನಿರ್ದೇಶಿಸಿದ್ದ ‘ತಾತಮ್ಮ ಕಲಾ’ ಚಿತ್ರದಲ್ಲಿ ಬಾಲಕೃಷ್ಣನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 50 ವರ್ಷ ಪೂರೈಸಿದ್ದು, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಸ್ಪೆಷಲ್ ಡಿಪಿ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಂದಮೂರಿ ಬಾಲಕೃಷ್ಣ ಅವರ ‘ಅಖಂಡ’ ‘ವೀರಸಿಂಹ ರೆಡ್ಡಿ’ ಸೇರಿದಂತೆ ‘ಭಗವಂತ ಕೇಸರಿ’ ಚಿತ್ರ ನೂರು ದಿನಗಳನ್ನು ಪೂರೈಸಿದ್ದು, ಹ್ಯಾಟ್ರಿಕ್ ಜಯ ಸಿಕ್ಕಂತಾಗಿದೆ. ನಂದಮೂರಿ ಬಾಲಕೃಷ್ಣ ಅವರ 109ನೇ ಸಿನಿಮಾ ಟೈಟಲ್ ಇನ್ನೇನು ಶೀಘ್ರದಲ್ಲೇ ಅನಾವರಣಗೊಳ್ಳಲಿದ್ದು, ಇದರ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.
50 years of Legendary talent 🤩 50 years of Royal stardom 🦁 50 years of Unmatched craze 💥
Honoring the God of Masses, Natasimham #NandamuriBalakrishna on completing 50 glorious years in the film industry!🎉 Wishing you many more years of ruling the silver screen with… pic.twitter.com/sdINiwCcUu