alex Certify ಬಾಲಿವುಡ್ ಪಾರ್ಟಿಗಳಿಗೆ ನಾನೇಕೆ ಹೋಗುವುದಿಲ್ಲ ? ಕಾರಣ ಬಿಚ್ಚಿಟ್ಟ ನಾನಾ ಪಾಟೇಕರ್ | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಪಾರ್ಟಿಗಳಿಗೆ ನಾನೇಕೆ ಹೋಗುವುದಿಲ್ಲ ? ಕಾರಣ ಬಿಚ್ಚಿಟ್ಟ ನಾನಾ ಪಾಟೇಕರ್ | Watch Video

ಹಿರಿಯ ನಟ ನಾನಾ ಪಾಟೇಕರ್ ಬಾಲಿವುಡ್ ಪಾರ್ಟಿಗಳಿಗೆ ಹೋಗದಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸ್ನೇಹಿತ ಮತ್ತು ಸಹನಟ ಅನಿಲ್ ಕಪೂರ್ ಅವರೊಂದಿಗೆ “ಲೆಜೆಂಡ್ಸ್ ಅನ್‌ಪ್ಲಗ್ಡ್” ಸಂವಾದದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

“ನಾನು ಮನೆಯಲ್ಲಿ ಕುಡಿದುಕೊಳ್ಳಬಹುದು, ಅಲ್ಲಿಗೆ ಹೋಗಿ ಕೆಟ್ಟ ಜನರೊಂದಿಗೆ ಕೆಟ್ಟ ಮಾತುಗಳನ್ನು ಕೇಳಲು ನನಗೆ ಇಷ್ಟವಿಲ್ಲ. ಅಲ್ಲದೆ, ನನ್ನ ಮನಸ್ಸು ಕೆಟ್ಟ ಮಾತಾಡುವವರಿಗೆ ಎರಡು ಏಟು ಕೊಡಲು ಸಿದ್ಧವಾಗಿರುತ್ತದೆ” ಎಂದು ನಾನಾ ಪಾಟೇಕರ್ ಹೇಳಿದ್ದಾರೆ.

ಅನಿಲ್ ಕಪೂರ್ ನಾನಾ ಪಾಟೇಕರ್ ಅವರ ಕೋಪದ ಬಗ್ಗೆ ಪ್ರಶ್ನಿಸಿದಾಗ, “ನಾನು ಕೋಪದ ಸಮಸ್ಯೆಯನ್ನು ಹೊಂದಿಲ್ಲ, ಆದರೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ, ನಾನು ಹೊಡೆಯುತ್ತೇನೆ” ಎಂದು ನಾನಾ ಪಾಟೇಕರ್ ಉತ್ತರಿಸಿದ್ದಾರೆ.

ಅನಿಲ್ ಕಪೂರ್ “ನೀವು ಪ್ರತಿಯೊಬ್ಬರನ್ನು ಹೊಡೆಯಬೇಕಾಗಿಲ್ಲ, ಪ್ರೀತಿಯಿಂದ ಅರ್ಥಮಾಡಿಸಬಹುದು” ಎಂದು ಹೇಳಿದಾಗ, ನಾನಾ ಪಾಟೇಕರ್ “ಅವರು ಪ್ರೀತಿಯಿಂದ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿದ್ದರೆ, ನಾನು ಅರ್ಥಮಾಡಿಸುತ್ತೇನೆ. ಆದರೆ ಅವರು ಕುಡಿದು ತೂರಾಡುತ್ತಿದ್ದರೆ, ಅವರನ್ನು ಹೇಗೆ ಅರ್ಥಮಾಡಿಸುವುದು ?” ಎಂದು ಪ್ರಶ್ನಿಸಿದ್ದಾರೆ.

ನಾನಾ ಪಾಟೇಕರ್ ಅವರ ಕೋಪದ ಕಾರಣದಿಂದಾಗಿ ನಿರ್ದೇಶಕರು ಅವರೊಂದಿಗೆ ಕೆಲಸ ಮಾಡಲು ಹೆದರುತ್ತಾರೆ ಎಂದು ಅನಿಲ್ ಕಪೂರ್ ಹೇಳಿದ್ದಾರೆ. “ನೀವು ನಿಮ್ಮ ಇಮೇಜ್ ಅನ್ನು ಬದಲಾಯಿಸಬೇಕು, ನೀವು ಹಾಗೆ ಇಲ್ಲ ಎಂದು ನನಗೆ ಗೊತ್ತು” ಎಂದು ಅನಿಲ್ ಕಪೂರ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಾನಾ ಪಾಟೇಕರ್, “74 ನೇ ವಯಸ್ಸಿನಲ್ಲಿ ನಾನು ನನ್ನನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...