
ಹೈದರಾಬಾದ್: ಹಲವು ಕ್ಲಿಷ್ಟಕರ ಪ್ರಕರಣಗಳ ತೀರ್ಪು ನೀಡಿದ್ದ ನ್ಯಾಯಾಧೀಶರೊಬ್ಬರು ಸ್ವತಃ ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೈದರಾಬಾದ್ ನ ನಾಂಪಲ್ಲಿ ಕೋರ್ಟ್ ನ್ಯಾಯಾಧೀಶ ಮಣಿಕಂಠ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಂಪಲ್ಲಿ ಕೋರ್ಟ್ ನಲ್ಲಿ ಮಣಿಕಂಠ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಯಲ್ಲಿ ಈ ಘಟನೆ ನಡೆದಿದೆ.
7 ವರ್ಷಗಳ ಹಿಂದೆ ಮೆಹಬೂಬ್ ನಗರ ಜಿಲ್ಲೆಯ ಭೂತ್ ಪುರ ಮಂಡಲ ಕೇಂದ್ರದ ಲಲಿತಾ ಎಂಬುವವರನ್ನು ಮಣಿಕಂಠ ವಿವಾಹವಾಗಿದ್ದರು. ದಂಪತಿಗೆ ಓರ್ವ ಮಗನಿದ್ದ. ಆದಾಗ್ಯೂ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳದಿಂದ ಎರಡು ವರ್ಷಗಳಿಂದ ಪತಿ-ಪತ್ನಿ ಬೇರೆ ಬೇರೆ ವಾಸವಾಗಿದ್ದರು. ಮಣಿಕಂಠನ ಪತ್ನಿ ಪುತ್ತಿಗೆಯಲ್ಲಿ ವಾಸವಾಗಿದ್ದರೆ, ಮಣಿಕಂಠ ಹೈದರಾಬಾದ್ ನ ಪೋಚಮ್ಮ ಬಸ್ತಿ ಶ್ರೀನಿಧಿ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಮಣಿಕಂಠನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ ಆಸ್ಪತ್ರೆಯಲ್ಲಿದ್ದು ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಮಾ.23ರಂದು ಮಧ್ಯಾಹ್ನ ಮಣಿಕಂಠ ತನ್ನ ಪತ್ನಿಗೆ ಕರೆ ಮಾಡಿದ್ದ. ಕರೆ ಮಾಡಿ ಮತ್ತೆ ಜಗಳವಾಡಿದ್ದ ಎನ್ನಲಾಗಿದೆ. ಇದೀಗ ದುಡುಕಿನ ನಿರ್ಧಾರ ಕೈಗೊಂಡಿರುವ ಮಣಿಕಂಠ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂಬರ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.