ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಣಿಕರಿಗೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.
ಬಿಎಂಟಿಸಿ ಬಸ್ ಗಳಂತೆಯೇ ಮೆಟ್ರೋದಲ್ಲಿಯೂ ಕೂಡ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಮೆಟ್ರೋ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರೆ ಈ ಬಟನ್ ಪ್ರೆಸ್ ಮಾಡಿದರೆ ನೇರವಾಗಿ ಮೆಟ್ರೋ ಲೋಕೋಪೈಲಟ್ ಗೆ ಕರೆ ಹೋಗುತ್ತದೆ. ಅಲ್ಲಿಂದ ಮೆಟ್ರೋ ಸಿಬ್ಬಂದಿಗಳು ಪ್ರಯಾಣಿಕರ ಸಮಸ್ಯೆ ಎನು ಎಂಬುದಾನ್ನು ಕೇಳುತ್ತಾರೆ. ಅಲ್ಲದೇ ಮೆಟ್ರೋ ಬೋಗಿಯಲ್ಲಿರುವ ಕ್ಯಾಮರಾ ಕೂಡ ಪ್ಯಾನ್ ಆಗಿ ಅಲ್ಲಿ ನಡೆಯುತ್ತಿರುವ ಸಂದರ್ಭವನ್ನು ರೆಕಾರ್ಡ್ ಮಾಡುತ್ತದೆ.
ಪ್ರತಿ ಬೋಗಿಯಲ್ಲಿಯೂ ಇಂತಹ 4 ಬಟನ್ ಅಳವಡಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ ಈ ಬಟನ್ ಪ್ರೆಸ್ ಮಾಡಿದರೆ ಮೆಟ್ರೋ ಸಿಬ್ಬಂದಿಗಳು ನೆರವಿಗೆ ಬರುತ್ತಾರೆ.
ಇನ್ನು ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಲ್ಪ್ ಲೈನ್ ನಂಬರ್ ಗಳು ಕೂಡ ಡಿಸ್ ಪ್ಲೇ ಆಗುತ್ತವೆ. ಟೋಲ್ ಫ್ರೀ ನಂಬರ್ ಜೊತೆಗೆ ಇನ್ನೂ ಮೂರು ನಂಬರ್ ಗಳು ಇದ್ದು, ಅವುಗಳಲ್ಲಿ ಯಾವುದೇ ನಂಬರ್ ಗೆ ಕರೆ ಮಾಡಿ ಸಮಸ್ಯೆ ಹೇಳಬಹುದು. ಇನ್ನು ಮಹಿಳಾ ಹೋಂ ಗಾರ್ಡ್ ಗಳು ಮೆಟ್ರೋದಲ್ಲಿ ಸಂಚಾರ ಮಾಡುತ್ತಿದ್ದು, ಅವರ ಸಹಾಯವನ್ನು ಪಡೆಯಬಹುದಾಗಿದೆ.