![](https://kannadadunia.com/wp-content/uploads/2025/02/metro1.jpg)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂಗರಿಗೆ ಒಂದಾದಮೇಲೊಂದರಂತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮುಂಜಾನೆಯಿಂದಲೇ ಬಿಎಂ ಆರ್ ಸಿ ಎಲ್ ಬಿಗ್ ಶಾಕ್ ನೀಡಿದೆ. ಇಂದು ಬೆಳಿಗ್ಗೆಯಿಂದಲೇ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿದೆ.
ಇಂದಿನಿಂದ ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ ಮಾಡಿ ಬಿಎಂ ಆರ್ ಸಿ ಎಲ್ ನಿನೆಯೇ ಅಧಿಕೃತ ಆದೇಶ ಹೊರಡಿಸಿತ್ತು. ಅದರಂತೆ ಇಂದು ಮುಂಜಾನೆಯಿಂದಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ.
0-2 ಕಿ.ಮೀ ಪ್ರಯಾಣಕ್ಕೆ 10 ರೂಪಾಯಿ ಟಿಕೆಟ್ ದರ ಹೆಚ್ಚಳವಾಗಿದೆ.
2-4 ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ ಹೆಚ್ಚಳ
4-6 ಕಿ.ಮೀ ಪ್ರಯಾಣಕ್ಕೆ 30 ರೂಪಾಯಿ ಹೆಚ್ಚಳ
6-8 ಕಿ.ಮೀ ಪ್ರಯಾಣಕ್ಕೆ 40 ರೂಪಾಯಿ ಹೆಚ್ಚಳ
8-10 ಕಿ.ಮೀ ಪ್ರಯಾಣಕ್ಕೆ 50 ರೂಪಾಯಿ ಹೆಚ್ಚಳ
10-15ಕಿ.ಮೀ ಪ್ರಯಾಣಕ್ಕೆ 60 ರೂಪಾಯಿ ಹೆಚ್ಚಳ
15-20 ಕಿ.ಮೀ ಪ್ರಯಾಣಕ್ಕೆ 70 ರೂಪಾಯಿ ಹೆಚ್ಚಳ
20-25 ಕೀ.ಮೀ ಪ್ರಯಾಣಕ್ಕೆ 80 ರೂಪಾಯಿ ಹೆಚ್ಚಳ
30 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇನ್ನು ಸ್ಮಾರ್ಟ್ ಕಾರ್ಡ್ ನಲ್ಲಿ ಮಿನಿಮಮ್ 50 ರೂಪಾಯಿ ಇರಬೇಕಿತ್ತು. ಈಗ ಸ್ಮಾರ್ಟ್ ಕಾರ್ಡ್ ನಲ್ಲಿ ಮಿನಿಮಮ್ 90 ರೂಪಾಯಿ ಇರಬೇಕು. ಸ್ಮಾರ್ಟ್ ಕಾರ್ಡ್ ಮೇಲೆ 40 ರೂಪಾಯಿ ಹೆಚ್ಚಳ ಮಾಡಿ ಬಿಎಂ ಆರ್ ಸಿ ಎಲ್ ಆದೇಶ ಹೊರಡಿಸಿದ್ದು, ಪ್ರಯಾಣಿಕರು ಪೇಚಿಗೆ ಸಿಲುಕಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣದಲ್ಲಿ ಭಾರಿ ಏರಿಕೆ ಮಾಡಿರುವ ಬಿಎಂ ಆರ್ ಸಿ ಎಲ್ ನಡೆಗೆಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.