ಬೆಂಗಳೂರು: ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೆಟ್ರೋ ಟ್ರ್ಯಾಕ್ ಮೇಲೆ ಮೊಬೈಲ್ ಬಿತ್ತು ಎಂದು ಮಹಿಳೆಯೊಬ್ಬರು ಟ್ರ್ಯಾಕ್ ಗೆ ಜಿಗಿದ ಘಟನೆ ನಡೆದಿದೆ.
ಇಂದಿರಾ ನಗರದ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರಂ 1ರಲ್ಲಿ ಈ ಘಟನೆ ನಡೆದಿದ್ದು, ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು 750KV ವೋಲ್ಟ್ ವಿದ್ಯುತ್ ಹರಿಯುವ ನಮ್ಮ ಮೆಟ್ರೋ ಟ್ರ್ಯಾಕ್ ಗೆ ಮಹಿಳೆ ಜಿಗಿದಿದ್ದಾರೆ. ತಕ್ಷಣ ಮೆಟ್ರೋ ಸಿಬ್ಬಂದಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.
ಮಹಿಳೆ ಟ್ರ್ಯಾಕ್ ಗೆ ಜಿಗಿದ ಪರಿಣಾಮ 15 ನಿಮಿಷಗಳ ಕಾಲ ಪರ್ಪಲ್ ಲೈನ್ ನಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಮಹಿಳೆಯನ್ನು ಮೇಲಕ್ಕೆ ಎತ್ತಲಾಗಿದೆ.