ಬೆಂಗಳೂರು: ಹೊಸ ವರ್ಷಾಚರಣೆಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್. ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ತಡರಾತ್ರಿವರೆಗೂ ಸಂಚರಿಸಲಿದೆ.
ಡಿಸೆಂಬರ್ 31ರಂದು ರಾತ್ರಿಯಿಂದ ಬೆಳಗಿನ ಜಾವ 2ಗಂಟೆಯವರೆಗೂ ನಮ್ಮ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂ ಆರ್ ಸಿ ಎಲ್ ಮಾಹಿತಿ ನೀಡಿದೆ.
ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ವಿಸ್ತೃತ ರೈಲು ಬಳಸಲು ಪ್ರಯಾಣಿಕರು ಟ್ರಿನಿಟಿ ಸರ್ಕಲ್ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ತೆರಳಬಹುದಾಗಿದೆ.
ರಾತ್ರಿ 11ಗಂಟೆಯ ಕೊನೇ ರೈಲನ್ನು ಜ.2ರ ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಟ್ರಿನಿಟಿ ಹಾಗೂ ಕಬ್ಬನ್ ನಿಲ್ದಾಣಗಳವರೆಗೆ ಪ್ರಯಾಣಿಕರಿಗೆ 50 ರೂಪಾಯಿ ಪೇಪರ್ ಟಿಕೆಟ್ ನೀಡಲಾಗುತ್ತದೆ. ಡಿ.31ರಂದು ಟೆಕೆಟ್ ವಿತರಣೆ ಇರುವುದಿಲ್ಲ. ಹೀಗಾಗಿ ಮುಂಚಿತವಾಗಿಯೇ ಟಿಕೆಟ್ ಪಡೆಯಬೇಕು ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.