ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಇವತ್ತು ಒಂದೇ ದಿನ 114 ನಮ್ಮ ಕ್ಲಿನಿಕ್ ಗಳನ್ನು ಆರಂಭಿಸಲಾಗುವುದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್ ಗಳಿಗೆ ಚಾಲನೆ ನೀಡಲಿದ್ದಾರೆ. 12 ರೀತಿಯ ಆರೋಗ್ಯ ಸೇವೆಗಳು ‘ನಮ್ಮ ಕ್ಲಿನಿಕ್’ ನಲ್ಲಿ ಉಚಿತವಾಗಿ ದೊರೆಯಲಿವೆ. ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಸಂಖ್ಯೆಯ ಕ್ಲಿನಿಕ್ ಗಳನ್ನು ಒಟ್ಟಿಗೆ ಆರಂಭಿಸಿದ ಹೆಗ್ಗಳಿಕೆಗೆ ಕರ್ನಾಟಕ ಸರ್ಕಾರ ಪಾತ್ರವಾಗಲಿದೆ.
ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಲಿನಿಕ್ ಗಳಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ 114 ನಮ್ಮ ಕ್ಲಿನಿಕ್ ಗಳು ಲೋಕಾರ್ಪಣೆಗೊಳ್ಳಲಿವೆ.