ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಾಸ್ ಕಳುಹಿಸಿರುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಎಂದು ನಾವು ಅಧಿವೇಶನ ನಿಗದಿಗೂ ಮೊದಲೇ ಸುಗ್ರೀವಾಜ್ಞೆ ಮಾಡಿದ್ದೆವು. ದೇಶ ರಕ್ಷಣೆ ವಿಚಾರ ಹೇಗೆ ಕಾಪಾಡುತ್ತೇವೆಯೋ ಹಾಗೇ ರಾಜ್ಯದ ಗೌರವದ ವಿಚಾರವಿದು. ಇದರಲ್ಲಿ ಯಾವುದೇ ಗೊಂದಲಗಳು ಇರಬಾರದು. ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು ಎಂದು ಹೇಳಿದರು.
ಅಸ್ಮಿತೆ, ಭಾಷೆ, ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹಾಗಾಗಿ ಕನ್ನಡ ಕಡ್ಡಾಯ ಮಾಡಿದ್ದೇವೆ. ಆದರೆ ರಾಜ್ಯಪಾಲರು ಯಾಕೆ ವಾಪಾಸ್ ಕಳುಹಿಸಿದ್ದಾರೆ ಗೊತ್ತಿಲ್ಲ. ಸುಗ್ರೀವಾಜ್ಞೆಯನ್ನು ನಾವು ಅಧಿವೇಶನದಲ್ಲಿ ಪಾಸ್ ಮಾಡಿಯೇ ಮಾಡುತ್ತೇವೆ. ಯಾರೂ ಇದಕ್ಕೆ ವಿರೋಧಿಸುತ್ತಿಲ್ಲ. ಆದರೆ ರಾಜ್ಯಪಾಲರು ಯಾಕೆ ವಿರೋಧಿಸಿದರು ಗೊತ್ತಿಲ್ಲ. ಕರ್ನಾಟಕದಲ್ಲಿದ್ದೀರಿ. ಕರ್ನಾಟಕದ ರಾಜ್ಯಪಾಲರಾಗಿದ್ದೀರಿ. ಇದೊಂದು ಭಾವನಾತ್ಮಕ ವಿಚಾರ. ಈ ವಿಚಾರದಲ್ಲಿ ಸರ್ಕಾರದ ನಿರ್ಧಾರದ ಬಗ್ಗೆ ನೀವು ತಪ್ಪು ಕಂಡು ಹಿಡಿಯಬಾರದು. ಸುಗ್ರೀವಾಜ್ಞೆಗೆ ಸಹಿ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.