
ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ತೆರಳುವಾಗ ಭದ್ರತಾ ಲೋಪ ಉಂಟಾಗಿದೆ. ಮೇಖ್ರಿ ಸರ್ಕಲ್ ಬಳಿಯ ಹೆಚ್.ಕ್ಯೂ.ಟಿ.ಸಿ.ಯಿಂದ ಮೋದಿ ತೆರಳುವಾಗ ರಸ್ತೆಗೆ ನುಗ್ಗಿ ಚೊಂಬು ಪ್ರದರ್ಶಿಸಲಾಗಿದೆ.
ಅರಮನೆ ಮೈದಾನಕ್ಕೆ ಮೋದಿ ತೆರಳುವಾಗ ರಸ್ತೆಗೆ ನುಗ್ಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರು ಚೊಂಬು ಪ್ರದರ್ಶಿಸಿದ್ದಾರೆ. ನಲಪಾಡ್ ಮತ್ತಿತರರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ಮೊಹಮ್ಮದ್ ನಲಪಾಡ್ ಮತ್ತಿತರರು ಇದ್ದಾರೆ.