ಬೆಂಗಳೂರು: ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ವಿರುದ್ಧ ಮತ್ತೊದು ಹಲ್ಲೆ ಆರೋಪ ಕೇಳಿಬಂದಿದ್ದು, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಯಲಹಂಕ ಕ್ಲಬ್ ನಲ್ಲಿ ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದು, ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಆದರೆ, ಆರೋಪ ತಳ್ಳಿಹಾಕಿರುವ ಮೊಹಮ್ಮದ್ ನಲಪಾಡ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ತಪ್ಪಿಸುವ ಸಲುವಾಗಿ ನನ್ನ ವಿರುದ್ಧ ಇಂತಹ ಆರೋಪ ಮಾಡಲಾಗುತ್ತಿದೆ. ಪದೇ ಪದೇ ನನ್ನ ವಿರುದ್ಧ ಆರೋಪಿಸುವುದರ ಹಿಂದೆ ಯಾರದ್ದೋ ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
BIG NEWS: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ವಿರುದ್ಧ FIR ದಾಖಲು…!
ನಿನ್ನೆ ನಾನು ಸಭೆ ಕರೆದಿದ್ದು ನಿಜ. ಪಕ್ಷ ಸಂಘಟನೆಗಾಗಿ ಮುಂದಿನ ಕಾರ್ಯಚಟುವಟಿಕೆ ನಿಟ್ಟಿನಲ್ಲಿ ಜಿಲ್ಲಾವಾರು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೆ. ಆದರೆ ರಾತ್ರಿ 9:30 ರ ಬಳಿಕ ನಾನು ವಾಪಸ್ ಆಗಿದ್ದೇನೆ. ಕ್ಲಬ್ ನಲ್ಲಿ ಯಾವುದೇ ರೀತಿ ಗಲಾಟೆ ನಡೆದಿಲ್ಲ. ಬೇಕಿದ್ದರೆ ರೆಸಾರ್ಟ್ ಸಿಸಿಟಿವಿ ಕ್ಯಾಮರಾ ಪರಿಶೀಲಿಸಲಿ. ಅಧ್ಯಕ್ಷ ಸ್ಥಾನ ತಪ್ಪಿಸಲು ನಮ್ಮವರೇ ಯಾರೋ ನನ್ನ ವಿರುದ್ಧ ಷಡ್ಯಂತ್ರ ಮಾಡಿದಂತಿದೆ. ಪದೇ ಪದೇ ನನ್ನ ಮೇಲೆ ಇಂತಹ ಆರೋಪ ಮಾಡುತ್ತಿರುವುದು ಸರಿಯಲ್ಲ. ಏನೇ ಆರೋಪ ಮಾಡಿದರೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರುವುದನ್ನು ತಪ್ಪಿಸಲಾಗದು ಎಂದಿದ್ದಾರೆ.