ಕೊಪ್ಪಳ: ಕೊಪ್ಪಳ ಜಿಲ್ಲೆ ಕನಕಗಿರಿ ಸಮೀಪದ ಉಮಳಿ ಕಾಟಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬೆತ್ತಲೆ ತಿರುಗಾಡಿ ಮುಜುಗರ ಉಂಟುಮಾಡಿದ್ದಾನೆ.
ಕೆ. ಮಲ್ಲಾಪುರ ಗ್ರಾಮದ ನರಿಯಪ್ಪ ಬುಡ್ಡಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಎಂದು ಹೇಳಲಾಗಿದೆ. ಮದ್ಯಸೇವನೆ ಮಾಡಿದ್ದ ನರಿಯಪ್ಪ ಜನನಿಬಿಡ ಪ್ರದೇಶದಲ್ಲಿಯೇ ಮೂತ್ರವಿಸರ್ಜನೆ ಮಾಡಿದ್ದಾನೆ. ಈ ವೇಳೆ ಅಲ್ಲಿದ್ದ ಮಹಿಳೆಯರು ಇಂತಹ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಬುದ್ಧಿವಾದ ಹೇಳಿದ್ದು, ಇದರಿಂದ ಸಿಟ್ಟಿಗೆದ್ದ ನರಿಯಪ್ಪ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿ ಬೆತ್ತಲಾಗಿ ತಿರುಗಾಡಿದ್ದಾನೆ. ಈತನ ದುರ್ವತನೆಯಿಂದ ಅಲ್ಲಿದ್ದವರಿಗೆ ಮುಜುಗರ ಉಂಟಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.