ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ಹಾವು ಪತ್ತೆಯಾಗಿದ್ದು, ಪ್ರಯಾಣಿಕರು ಭಯಭೀತರಾದ ಪ್ರಸಂಗ ನಡೆದಿದೆ.
ಫ್ಲೋರಿಡಾದ ಟ್ಯಾಂಪಾ ನಗರದಿಂದ ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ಹಾವು ಕಾಣಿಸಿಕೊಂಡಿದೆ. ವಿಮಾನವು ಲ್ಯಾಂಡಿಂಗ್ ಆದ ನಂತರ ಪ್ರಯಾಣಿಕರು ಹಾವನ್ನು ಗುರುತಿಸಿದ್ದಾರೆ. ಬಳಿಕ ಗಾಬರಿಯಿಂದ ಕಿರುಚಿದ್ದಾರೆ.
ವಿಮಾನ ನಿಲ್ದಾಣದ ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ವಿಮಾನದಿಂದ ಹಾವನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್, ಯಾರಿಗೂ ಅಪಾಯವಾಗಿಲ್ಲ ಮತ್ತು ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ.
ಹಾವನ್ನು ತೆಗೆದ ನಂತರ, ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಕೆಳಗಿಳಿದರು. ಸಾಮಾನ್ಯವಾಗಿ ಆ ಜಾತಿಯ ಹಾವು ಫ್ಲೋರಿಡಾ ಕೌಂಟಿಯಲ್ಲಿ ಕಂಡುಬರುತ್ತದೆ. ಅವು ಮನುಷ್ಯರಿಗೆ ವಿಷಕಾರಿ, ಆಕ್ರಮಣಕಾರಿ ಅಲ್ಲ ಎಂದು ಫ್ಲೋರಿಡಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಹೇಳಿದೆ.
ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ಮಲೇಷ್ಯಾದಲ್ಲಿ ಏರ್ ಏಷ್ಯಾ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವಿಮಾನವು ಹಾರಾಟದಲ್ಲಿದ್ದಾಗ ಪ್ರಯಾಣಿಕರಿಗೆ ಹಾವು ಕಂಡುಬಂದಿತ್ತು.