
ಚಂಡೀಗಢದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಈ ವಿಡಿಯೋವನ್ನು ಚಂಡೀಗಢ ಪೊಲೀಸರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ ದೃಶ್ಯ ಆನ್ಲೈನ್ನಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತು.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ನಾಯಿ ಮರಿಯನ್ನು ಸುರಕ್ಷಿತವಾಗಿ ಕೈಯಲ್ಲಿ ಹಿಡಿದುಕೊಂಡು, ನಿಧಾನವಾಗಿ ಏಣಿಯ ಮೂಲಕ ವ್ಯಕ್ತಿ ಏರಿ ಬರುತ್ತಿರುವುದನ್ನು ನೋಡಬಹುದು. ಕೆಳಗೆ ನೀರು ರಭಸವಾಗಿ ಹರಿಯುತ್ತಿದ್ದು, ಎದೆ ಝಲ್ಲೆನ್ನಿಸುತ್ತದೆ. ಆದರೂ ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಾಯಿಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಟ್ವಿಟರ್ ನಲ್ಲಿ ಚಂಡೀಗಢ ಪೊಲೀಸರು ನಾಯಿ ಮರಿಯನ್ನು ರಕ್ಷಿಸಲು ಸಹಾಯ ಮಾಡಿದ ಅಗ್ನಿಶಾಮಕ ದಳದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದ್ದು, ವ್ಯಕ್ತಿಯ ಸಮಯೋಚಿತ ನಡೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾನವೀಯತೆ ಸ್ವಲ್ಪವಾದ್ರೂ ಉಳಿದಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.