ನಮ್ಮ ದೇಹದ ಒಂದೊಂದು ಅಂಗಗಳು ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಕಣ್ಣು, ನಾಲಿಗೆ, ಚರ್ಮ, ಹೀಗೆ ಹಲವು ಭಾಗಗಳಲ್ಲಾಗುವ ಬದಲಾವಣೆಯ ಮೂಲಕ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ಕಂಡುಕೊಳ್ಳಬಹುದು.
ಅದೇರೀತಿ ನಮ್ಮ ಉಗುರಿನಿಂದಲೂ ಕೂಡ ನಮಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದರೆ ಉಸಿರಾಟದ ಸಮಸ್ಯೆ, ಮಧುಮೇಹ, ಹಳದಿ ಜಾಂಡೀಸ್ ಕಾಯಿಲೆಯನ್ನು ಸೂಚಿಸುತ್ತದೆ.
ಉಗುರಿನ ಮೇಲೆ ಬಿಳಿ ಚುಕ್ಕೆಗಳು ಇದ್ದರೆ ಶಿಲೀಂಧ್ರ ಸೋಂಕಿಗೆ ಒಳಗಾಗಿದೆ ಎಂದರ್ಥ. ಕೆಲವೊಮ್ಮೆ ಉಗುರಿಗೆ ಹೊರಗಿನಿಂದ ಪೆಟ್ಟು ಬಿದ್ದಿದೆ ಎನ್ನಲಾಗುತ್ತದೆ.
ಉಗುರಿನ ಮೇಲೆ ಕಪ್ಪು ಕಲೆಗಳು ಮೂಡಿದರೆ ಇದು ಕೆಲವೊಮ್ಮೆ ಉಗುರಿಗೆ ಪೆಟ್ಟಾಗಿ ರಕ್ತ ಹೆಪ್ಪುಗಟ್ಟಿದ ಸೂಚನೆಯನ್ನು ನೀಡುತ್ತದೆ.
ಉಗುರು ಸಿಪ್ಪೆ ಸುಲಿದರೆ ಥೈರಾಯ್ಡ್ ಸಮಸ್ಯೆಯನ್ನು ಸೂಚಿಸುತ್ತದೆ. ಉಗುರು ಒಡೆದರೆ ಅದು ವಿಟಮಿನ್ ಕೊರತೆಯ ಸಂಕೇತವಾಗಿದೆ.