
ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಉಂಬ್ರೇಡ್ ನಗರದ ಬಳಿ ಇರುವ ಮಕರ್ಧೊಕುಡ ಜಲಾಶಯದಲ್ಲಿ ಈ ಘಟನೆ ನಡೆದಿದ್ದು, ಆಗಸ್ಟ್ 15 ರಂದು ಜಲಾಶಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೂವರು ಯುವಕರು ಡ್ಯಾಮ್ ಮೇಲೆ ಹೋಗಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ.
ಓರ್ವ ಮೇಲೆ ಹತ್ತಲು ಯಶಸ್ವಿಯಾಗಿದ್ದು, ಇನ್ನಿಬ್ಬರು ಆತನನ್ನು ಕೆಳಗೆ ತರಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೆ ನಿರಾಕರಿಸಿದ ಆತ ಕೈ ಮೇಲೆತ್ತಿ ಸಾರ್ವಜನಿಕರ ಕಡೆ ವೇವ್ ಮಾಡಿದ್ದು, ಇದೇ ಸಂದರ್ಭದಲ್ಲಿ ಆತನ ಇಬ್ಬರು ಸ್ನೇಹಿತರು ಕೆಳಗೆ ಬಿದ್ದಿದ್ದಾರೆ. ಆದರೆ ವೇವ್ ಮಾಡುತ್ತಿದ್ದ ಅವರ ಸ್ನೇಹಿತ ನೇರವಾಗಿ ಜಲಾಶಯಕ್ಕೆ ಬಿದ್ದಿದ್ದಾನೆ. ಕಿಕ್ಕಿರಿದಿದ್ದ ಸಾರ್ವಜನಿಕರು ಈ ದೃಶ್ಯವನ್ನು ಅಸಹಾಯಕರಾಗಿ ನೋಡಿದ್ದು ಜಲಾಶಯಕ್ಕೆ ಬಿದ್ದ ಯುವಕನ ನೆರವಿಗೆ ಧಾವಿಸಲು ಸಾಧ್ಯವಾಗಿಲ್ಲ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಬಳಿಕ ಯುವಕ ಈಜಿಕೊಂಡು ದಡ ಸೇರಿದ್ದಾನೆ ಎನ್ನಲಾಗಿದ್ದು, ಆದರೆ ಇಂತಹ ಹುಚ್ಚಾಟಗಳಿಂದ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದಂತೂ ಖಚಿತ.